ವಿಶ್ವದ ಮೊದಲ 4ಕೆ ಎಚ್‍ಡಿ ಆರ್ ಸ್ಕ್ರೀನ್ ಫೋನ್ ಬಿಡುಗಡೆ: ವಿಶೇಷತೆ ಏನು? ಬೆಲೆ ಎಷ್ಟು?

Public TV
3 Min Read
Sony Xperia XZ Premium 2

ಬಾರ್ಸಿಲೋನಾ: ವಿಶ್ವದ ಮೊದಲ 4ಕೆ ಎಚ್‍ಡಿ ಆರ್  ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನನ್ನು ಜಪಾನ್‍ನ ಸೋನಿ ಕಂಪೆನಿ ಬಿಡುಗಡೆ ಮಾಡಿದೆ.  ಸ್ಪೇನ್ ರಾಜಧಾನಿ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮ್ಮೇಳನದಲ್ಲಿ ಎಕ್ಸ್ ಪೀರಿಯಾ ಎಕ್ಸ್ ಝಡ್ ಪ್ರೀಮಿಯಂ ಫೋನನ್ನು ಬಿಡುಗಡೆ ಮಾಡಿದೆ.

ಈ ಫೋನಿಗೆ ಸೋನಿ 3840 * 2160 ಪಿಕ್ಸೆಲ್, 801 ಪಿಪಿಐ( ಪಿಕ್ಸೆಲ್ ಪರ್ ಇಂಚ್) ಇರುವ 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಸ್ಕ್ರೀನ್ ನೀಡಿದೆ. ಒಂದು ಸೆಕೆಂಡ್‍ಗೆ 960 ಫ್ರೇಂನಲ್ಲಿ ಸ್ಲೋ ಮೋಷನ್ ವಿಡಿಯೋಗಳನ್ನು ಸೆರೆಹಿಡಿಯಬಲ್ಲ ಸಾಮರ್ಥ್ಯ ಈ ಫೋನಿಗೆ ಇದೆ. ವರ್ಲ್ಡ್  ಫಾಸ್ಟೆಸ್ಟ್ ಇಮೇಜ್ ಕ್ಯಾಪ್ಚುರ್ ಟೆಕ್ನಾಲಜಿಯನ್ನು ಈ ಫೋನ್ ಹೊಂದಿದೆ ಎಂದು ಸೋನಿ ಹೇಳಿದೆ. ಅಷ್ಟೇ ಅಲ್ಲದೇ ಈ ಫೋನ್ ಕ್ಯಾಮೆರಾ ಮೂರು ಸೆನ್ಸರ್ ವ್ಯವಸ್ಥೆಯನ್ನು ಹೊಂದಿದೆ.

ಇಮೇಜ್ ಸೆನ್ಸರ್(ಹೈ ಕ್ವಾಲಿಟಿ ಫೋಟೋ ಮತ್ತು ಅಟೋಫೋಕಸ್ ಸ್ಪೀಡ್ ಬಳಸಿ ಬ್ಲರ್ ಆಗದಂತೆ ತಡೆಯುವ ಸೆನ್ಸರ್) ಲೇಸರ್ ಅಟೋ ಫೋಕಸ್ ಸೆನ್ಸರ್(ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯಲು ಸಹಾಯ ಮಾಡಬಲ್ಲ ಸೆನ್ಸರ್) ಆರ್‍ಜಿಬಿಸಿ ಐಆರ್ ಸೆನ್ಸರ್(ವೈಟ್ ಬ್ಯಾಲೆನ್ಸ್ ಸರಿ ಹೊಂದಿಸಬಲ್ಲ ಸೆನ್ಸರ್) ವ್ಯವಸ್ಥೆ ಈ ಫೋನಿನಲ್ಲಿ ಇದೆ.

ಸೋನಿ ಕ್ವಾಲಕಂ ಕಂಪೆನಿಯ ಚಿಪ್ ಬಳಸಿದ್ದು, ಒಂದು ಸೆಕೆಂಡ್‍ಗೆ ಒಂದು ಗಿಗಾಬೈಟ್ ವೇಗದಲ್ಲಿ ಡೌನ್‍ಲೋಡ್ ಮಾಡುವ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ. ಹೀಗಾಗಿ ಸಿನಿಮಾಗಳು ವಿಡಿಯೋಗಳು ಕೆಲವೇ ಸೆಕೆಂಡ್‍ಗಳಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಗಿಗಾಬೈಟ್ ಎಲ್‍ಟಿಇ ವೇಗವನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಇದಾಗಿದೆ.

4ಕೆ ವಿಡಿಯೋಗಳು ಸುಲಭವಾಗಿ ಸಿಗದ ಹಿನ್ನೆಲೆಯಲ್ಲಿ ಸೋನಿ ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅಮೇಜಾನ್ ಪ್ರೈಂನಲ್ಲಿರುವ ಕೆಲ ವಿಡಿಯೋಗಳನ್ನು ಗ್ರಾಹಕರು ವೀಕ್ಷಿಸಬಹುದು.

ಬೆಲೆ ಎಷ್ಟು?
ಸೋನಿ ಈಗ ಬಿಡುಗಡೆ ಮಾಡಿದ್ದರೂ, ಏಪ್ರಿಲ್ 5ರಂದು ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬೆಲೆಯನ್ನು ಕಂಪೆನಿ ಅಧಿಕೃತವಾಗಿ ಪ್ರಕಟಿಸದೇ ಇದ್ದರೂ 799 ಡಾಲರ್(ಅಂದಾಜು 53 ಸಾವಿರ ರೂ.) ದರವನ್ನು ನಿಗದಿಪಡಿಸುವ ಸಾಧ್ಯತೆಯಿದೆ.

ಪಿಕ್ಸೆಲ್,ಪಿಪಿಐ ಜಾಸ್ತಿ ಇದ್ರೆ ಏನು ಲಾಭ?
ಪಿಕ್ಸೆಲ್ ಮತ್ತು ಪಿಪಿಐ ಜಾಸ್ತಿ ಇದ್ದಷ್ಟು ಗ್ರಾಹಕರು ಉತ್ತಮ ಗುಣಮಟ್ಟದ ವಿಡಿಯೋ, ಫೋಟೋಗಳನ್ನು ನೋಡಬಹುದು. ಸಾಧಾರಣ ಈಗ ಬರುತ್ತಿರುವ ಹೆಚ್ಚಿನ ಫೋನ್‍ಗಳು 1920*1080 ಪಿಕ್ಸೆಲ್, 1440*2560 ಪಿಕ್ಸೆಲ್, 441 ಪಿಪಿಐ, 518 ಪಿಪಿಐ ನೊಂದಿಗೆ ಬಿಡುಗಡೆಯಾಗುತ್ತದೆ. ಆದರೆ ಈ  ಫೋನ್  3840 * 2160 ಪಿಕ್ಸೆಲ್, 801 ಪಿಪಿಐ ನೊಂದಿಗೆ ಬಿಡುಗಡೆಯಾಗಿದೆ.

ಇದನ್ನೂ ಓದಿ: 4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

ಎಕ್ಸ್ ಪೀರಿಯಾ ಎಕ್ಸ್ ಝಡ್ ಪ್ರೀಮಿಯಂ ಗುಣವೈಶಿಷ್ಟ್ಯಗಳು

ಬಾಡಿ:
– ಸಿಂಗಲ್ ಸಿಮ್/ ಡ್ಯುಯಲ್ ಸಿಮ್
– 156*77*7.9 ಮಿ.ಮೀ ಗಾತ್ರ
– 195 ಗ್ರಾಂ

ಡಿಸ್ಪ್ಲೇ:
– 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಟಚ್‍ಸ್ಕ್ರೀನ್
– 3840*2160 ಪಿಕ್ಸೆಲ್,801 ಪಿಪಿಐ
– ಕಾರ್ನಿಂಗ್ ಗ್ಲಾಸ್ 5

ಪ್ಲಾಟ್‍ಫಾರಂ:
– ಆಂಡ್ರಾಯ್ಡ್ 7.1 ನೂಗಟ್ ಓಎಸ್
– ಕ್ವಾಲಕಂ ಸ್ನಾಪ್‍ಡ್ರಾಗನ್ 835 ಅಕ್ಟಾಕೋರ್ ಪ್ರೊಸೆಸರ್
– Adreno 540 ಗ್ರಾಫಿಕ್ಸ್ ಪ್ರೊಸೆಸರ್

ಮೆಮೊರಿ
– 64 ಜಿಬಿ ಆಂತರಿಕ ಮೆಮೊರಿ
– 4ಜಿಬಿ ರಾಮ್
– 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಕ್ಯಾಮೆರಾ
– 19 ಎಂಪಿ ಮೋಷನ್ ಐ ಹಿಂದುಗಡೆ ಕ್ಯಾಮೆರಾ
– 1/2.3” Exmor ಮೊಬೈಲ್ ಮೆಮೊರಿ stacked ಸೆನ್ಸರ್
– ಪೇಸ್ ಡಿಟೆಕ್ಷನ್,ಲೇಸರ್ ಅಟೋಫೋಕಸ್, ಎಲ್‍ಇಡಿ ಫ್ಲಾಶ್
– ಪಿಕ್ಸೆಲ್ ಪಿಚ್ 1.22μm
– ಎಕ್ಸ್ 8 ಡಿಜಿಟಲ್ ಝೂಮ್,
– ಲೋ ಲೈಟ್ ಫೋಟೋ : ISO 12800 / 4000 (ವಿಡಿಯೋ)
– 0.5 ಸೆಕೆಂಡ್ ಕ್ವಿಕ್ ಲಾಂಚ್ ಆಂಡ್ ಲಾಂಚರ್
– ಟಚ್ ಫೋಕಸ್, ಫೇಸ್ ಡಿಟೆಕ್ಷನ್
– ಮುಂದುಗಡೆ 13 ಎಂಪಿ ಕ್ಯಾಮೆರಾ

ಇತ್ಯಾದಿ
– ಫಿಂಗರ್ ಪ್ರಿಂಟ್ ಸೆನ್ಸರ್,ಎನ್‍ಎಫ್‍ಸಿ,
– ಫಾಸ್ಟ್ ಬ್ಯಾಟರಿ ಚಾರ್ಜಿಂಗ್
– ತೆಗೆಯಲು ಸಾಧ್ಯವಿಲ್ಲದ 320 ಎಂಎಎಚ್ ಲಿಯಾನ್ ಬ್ಯಾಟರಿ

ಇದನ್ನೂ ಓದಿ: 17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

 

Sony Xperia XZ Premium 3

ಸೋನಿ ಕ್ಯಾಮೆರಾದ ಮೂರು ಸೆನ್ಸರ್ ಗಳು
Sony Xperia XZ Premium 5

ಎಚ್ ಡಿ ಮತ್ತು 4ಕೆ ರೆಸೊಲೂಶನ್ ಹೀಗಿರುತ್ತೆ

sony ppi

Sony Xperia XZ Premium 1

Sony Xperia XZ Premium 4

Share This Article
Leave a Comment

Leave a Reply

Your email address will not be published. Required fields are marked *