CinemaKarnatakaLatestMain PostSandalwood

‘ಬಿಗ್ ಬಾಸ್’ ಗೆ ವಾರ್ನ್ ಮಾಡಿ ಕ್ಷಮೆ ಕೇಳು ಎಂದ ಗಟ್ಟಿಗಿತ್ತಿ ಸೋನು ಶ್ರೀನಿವಾಸ್ ಗೌಡ

ಹುಶಃ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಅತೀ ಹೆಚ್ಚು ಬಿಗ್ ಬಾಸ್ ಕಡೆಯಿಂದ ವಾರ್ನ್ ಮಾಡಿಸಿಕೊಂಡ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಇರಬೇಕು. ಮಾತಿನ ವಿಚಾರದಲ್ಲಿ, ಮೈಕ್ ಸರಿಯಾಗಿ ಹಾಕಿಕೊಳ್ಳದೇ ಇರುವುದಕ್ಕೆ, ಜಗಳ, ರೂಲ್ಸ್ ಬ್ರೇಕ್ ಮಾಡೋದು ಹೀಗೆ ಪದೇ ಪದೇ ಹೇಳಿಸಿಕೊಳ್ಳುತ್ತಲೇ ಇರುತ್ತಾರೆ. ಇಂತಹ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಗೆ ವಾರ್ನ್ ಮಾಡಿ ಸಖತ್ ಸುದ್ದಿಯಾಗಿದ್ದಾರೆ.

ಮೈಕು ಸರಿಯಾಗಿ ಹಾಕಿಕೊಳ್ಳದೇ ಇರುವ ವಿಚಾರಕ್ಕಾಗಿ ಬಿಗ್ ಬಾಸ್ ಸೋನು ಶ್ರೀನಿವಾಸ್ ಗೌಡಗೆ ವಾರ್ನ್ ಮಾಡುತ್ತಾರೆ. ಅದರಿಂದ ಸಿಟ್ಟಿಗೆದ್ದ ಸೋನು, ‘ಬಿಗ್ ಬಾಸ್ ನಾನು ಮೈಕ್ ಸರಿಯಾಗಿ ಹಾಕಿಕೊಂಡಿದ್ದೇನೆ. ಪದೇ ಪದೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಿ? ನನ್ನ ಮೇಲೆ ಯಾಕೆ ನಿಮಗೆ ಕೋಪ? ಯಾರಿಗೂ ನೀವು ಹೇಳುವುದಿಲ್ಲ. ನನಗೆ ಹೆಚ್ಚು ಹೇಳುತ್ತಿದ್ದೀರಿ. ಬೇರೆಯವರಿಗೆ ಹೇಳಬೇಕಾಗಿರುವುದನ್ನು ನನ್ನ ಮೂಲಕ ಹೇಳುತ್ತಿದ್ದೀರೋ?’ ಎಂದು ಗರಂ ಆದರು. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

ಆ ಕೋಪವನ್ನೇ ಮುಂದುವರೆಸಿದ ಸೋನು, ಈ ವಿಚಾರವಾಗಿ ಬಿಗ್ ಬಾಸ್ ನನಗೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಪದೇ ಪದೇ ನನ್ನನ್ನೇ ಟಾರ್ಗೆಟ್ ಮಾಡುವುದು ಸರಿ ಅಲ್ಲ ಎಂದು ಖಡಕ್ಕಾಗಿಯೇ ಬಿಗ್ ಬಾಸ್ ಗೆ ಆವಾಜ್ ಹಾಕಿದ್ದಾರೆ. ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ಅನ್ನೇ ಹೆದರಿಸಿದ ಗಟ್ಟಿಗಿಟ್ಟಿ ಸೋನು ಎನ್ನುವ ಪ್ರಶಂಸೆ ವ್ಯಕ್ತವಾಗುತ್ತಿದೆ.

Live Tv

Leave a Reply

Your email address will not be published.

Back to top button