ವೈಯಕ್ತಿಕ ಜೀವನದಲ್ಲಿ ಪ್ರೀತಿಗಾಗಿ ಮೋಸ ಹೋಗಿರುವ ಸೋನು ಶ್ರೀನಿವಾಸ್ ಗೌಡ, ಬಿಗ್ ಬಾಸ್ ಮನೆಯಲ್ಲಿ ಪ್ರೀತಿಯ ಪಾಠ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾದ ಹುಡುಗನನ್ನು ಪ್ರೀತಿಸುವ ಸೋನು, ಆನಂತರ ತನ್ನ ಖಾಸಗಿ ವಿಡಿಯೋವನ್ನು ಆ ಹುಡುಗನೊಂದಿಗೆ ಶೇರ್ ಮಾಡುತ್ತಾರೆ. ಆತ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚುವ ಮೂಲಕ ಸೋನು ಗೌಡ ಅವರ ಮರ್ಯಾದೆ ಹಾಳು ಮಾಡುತ್ತಾನೆ. ಹೀಗಾಗಿ ಅವರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ.
Advertisement
ತಾವು ಪ್ರೀತಿಯಲ್ಲಿ ಮೋಸ ಹೋದ ವಿಷಯವನ್ನು ಬಿಗ್ ಬಾಸ್ ಮನೆಗೆ ಬಂದ ದಿನವೇ ಎಲ್ಲರೊಂದಿಗೆ ಹಂಚಿಕೊಂಡಿದ್ದ ಸೋನು ಶ್ರೀನಿವಾಸ್ ಗೌಡ, ಆ ಹುಡುಗನಿಂದ ತಮಗಾದ ಅವಮಾನ, ಇವತ್ತಿಗೂ ತನ್ನ ತಂದೆಯೊಂದಿಗೆ ಮಾತನಾಡದೇ ಇರುವ ಸಂಕಟ. ಮನೆಗೆ ಹೋಗದೇ ಇರುವ ದುಃಖವನ್ನೂ ಹೊರ ಹಾಕುತ್ತಾರೆ. ಇತರ ಸ್ಪರ್ಧಿಗಳು ಸೋನುವನ್ನು ಸಮಾಧಾನಿಸುತ್ತಾರೆ. ಅಲ್ಲಿಗೆ ಈ ವಿಷಯವನ್ನು ಮರೆಯಲು ಕೆಲವರು ಸಲಹೆ ನೀಡುತ್ತಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ
Advertisement
Advertisement
ತಮ್ಮ ಜೀವನದಲ್ಲಿ ನಡೆದಿರುವ ಕಹಿ ಘಟನೆಯನ್ನು ಮರೆಯುವುದಕ್ಕೆ ಪ್ರಯತ್ನಿಸುತ್ತಿರುವ ಸೋನು, ಇದೀಗ ಪ್ರೀತಿ ಅಂದರೆ ಏನು? ಪ್ರೀತಿ ಮಾಡಿದರೆ ಹೇಗಿರಬೇಕು? ಎನ್ನುವುದರ ಕುರಿತು ಬಿಗ್ ಬಾಸ್ ಮನೆಯಲ್ಲಿ ಪಾಠ ಮಾಡಿದ್ದಾರೆ. ಪ್ರೀತಿಯಲ್ಲಿ ಯಾವುದೇ ಕಾರಣಕ್ಕೂ ಮೋಸ ಇರಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಪ್ರೀತಿ ಬಗ್ಗೆ ಸೋನು ಮಾಡಿದ ಪಾಠ ಇದೀಗ ಚರ್ಚೆಗೂ ಕಾರಣವಾಗಿದೆ. ಸೋನು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿದೆ.