ಬಿಗ್ ಬಾಸ್ (Bigg Boss) ಖ್ಯಾತಿಯ ರಾಕೇಶ್ ಅಡಿಗ- ಸೋನು ಗೌಡ (Sonu Gowda) ಅವರು ಸದ್ಯ ಪಾರ್ಟಿ ಮೂಡ್‌ನಲ್ಲಿದ್ದಾರೆ. ದೊಡ್ಮನೆಯಲ್ಲಿ ರಾಕೇಶ್- ಸೋನು ಪ್ರೇಮ ಪಕ್ಷಿಗಳು ಎಂದೂ ಬಿಂಬಿಸಲಾಗಿತ್ತು. ಆದರೆ ನಮ್ಮ ನಡುವೆ ಏನಿಲ್ಲ ಅಂತಾ ಹೇಳುತ್ತಲೇ ಗಾಸಿಪ್‌ಗೆ ಫುಲ್ ಸ್ಟಾಪ್ ಹಾಕಿದ್ರು. ಈಗ ರಾಕಿ -ಸೋನು ಮಸ್ತ್ ಆಗಿ ಪಾರ್ಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ
‘ಜೋಶ್’ ಸಿನಿಮಾದ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟ ರಾಕೇಶ್ ಅಡಿಗ (Rakesh Adiga) ಅವರು ಬಿಗ್ ಬಾಸ್ ಒಟಿಟಿ, ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟರು. ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿಗೆ ಸಖತ್ ಫೈಟ್ ಕೊಟ್ಟರು. ಆದರೆ ಕೊನೆ ಹಂತದಲ್ಲಿ ರನ್ನರ್ ಅಪ್ ಆಗಿ ರಾಕೇಶ್ ಗುರುತಿಸಿಕೊಂಡರು. ಒಟಿಟಿ ಬಿಗ್ ಬಾಸ್‌ನಲ್ಲಿ ಸೋನು ಶ್ರೀನಿವಾಸ್ ಗೌಡ- ರಾಕೇಶ್ ಅಡಿಗ ಜೋಡಿಯಾಗಿ ಹೈಲೆಟ್ ಆಗಿದ್ದರು. ಈ ಲವ್ ಬರ್ಡ್ಸ್ ಪ್ರೀತಿಯಲ್ಲಿದ್ದಾರಾ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ಇದೀಗ ಕೆಲ ಸಮಯದ ನಂತರ ರಾಕೇಶ್ ಅವರನ್ನ ಟಿಕ್ ಟಾಕ್ ಚೆಲುವೆ ಸೋನು ಮೀಟ್ ಆಗಿದ್ದಾರೆ. ಒಟ್ಟಿಗೆ ಪಾರ್ಟಿ ಮಾಡಿ ಮಸ್ತ್ ಮಜಾ ಮಾಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಸೋನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಮ್ಮದು ಒಂದು ಇರಲಿ ಅಂತಾ ಅಡಿಬರಹ ನೀಡಿ, ರಾಕಿ-ಸೋನು ಜೊತೆಯಾಗಿ ರೀಲ್ಸ್ ಮಾಡಿದ್ದಾರೆ.
ಸದ್ಯ ಸೋನು-ರಾಕಿ ಮಸ್ತ್ ಡ್ಯಾನ್ಸ್ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡ್ತಿದ್ದಂತೆ ಲಡ್ಡು ಬಂದು ಬಾಯಿಗೆ ಬಿತ್ತಾ.? ಸೂಪರ್ ಜೋಡಿ, ಮದುವೆ ಯಾವಾಗಾ ಅಂತಾ ಬಗೆ ಬಗೆಯ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.