ಬಿಗ್ ಬಾಸ್ ಮನೆಯಲ್ಲಿ ಇರುವವರಲ್ಲಿ ಕೆಲವು ವ್ಯಕ್ತಿಗಳಿಗೆ ತುಂಬಾ ಕ್ಲ್ಯಾರಿಟಿ ಇದೆ. ಇನ್ನೂ ಕೆಲವರು ತಮ್ಮಿಷ್ಟದಂತೆ ಬದುಕುತ್ತಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಅವರಲ್ಲಿ ಯಾವತ್ತೂ ನಾನು ಫೇಕ್ ಕಾಣಲಿಲ್ಲ. ಅವರು ಮುಖವಾಡ ಹಾಕಿಕೊಂಡು ಆಟವಾಡುತ್ತಿಲ್ಲ. ನಾನು ಮೊದಲ ದಿನದಿಂದ ಗಮನಿಸುತ್ತಿದ್ದೇನೆ, ಅವರು ತುಂಬಾ ಒಳ್ಳೆಯ ಹುಡುಗಿ ಎಂದು ಕೊಂಡಾಡಿದ್ದಾರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ನಟ ಅರ್ಜುನ್ ರಮೇಶ್.
ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುಂಚೆ ಸೋನು ಶ್ರೀನಿವಾಸ್ ಗೌಡ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿರುವ ಅರ್ಜುನ್, ಅವರ ಫೋಟೋವಾಗಲಿ, ವಿಡಿಯೋವಾಗಲಿ ಯಾವುದನ್ನೂ ನಾನು ಗಮನಿಸಿಲ್ಲ. ಅಸಲಿಯಾಗಿ ಅವರು ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದಿದ್ದಾರೆ. ಎರಡು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಅವರೊಟ್ಟಿಗೆ ಇದ್ದಾಗ ಅವರನ್ನು ನೋಡಿ ನನಗೆ ಅನಿಸಿದ್ದು ಇಷ್ಟೆ. ಅವರು ಫೇಕ್ ಅಲ್ಲ ಅಂತ ಎಂದು ಮೆಚ್ಚಿ ಮಾತನಾಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಕುರಿತು ಬಿಗ್ ಬಾಸ್ ಮನೆಯಲ್ಲಿ ಬರೀ ನೆಗೆಟಿವ್ ಕಾಮೆಂಟ್ ಗಳೇ ಬರುತ್ತವೆ. ಪ್ರತಿಯೊಬ್ಬರು ಆ ಹುಡುಗಿಯ ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡಿದ್ದಾರೆ. ಆದರೆ, ನನಗೆ ಯಾವತ್ತೂ ಆಕೆ ಹಾಗೆ ಅನಿಸಿಲ್ಲ. ಯಾಕೆಂದರೆ, ನನಗೆ ಆಕೆಯ ಯಾವ ವಿಷಯವೂ ನನಗೆ ಗೊತ್ತಿಲ್ಲ. ಎರಡು ವಾರಗಳಿಂದ ಪರಿಚಯವಷ್ಟೇ. ಅದನ್ನೇ ಆಧಾರವಾಗಿ ಇಟ್ಟುಕೊಂಡು ಹೇಳುತ್ತೇನೆ ಮತ್ತು ಆಕೆಯ ನಡೆಗೆ ಬೆಂಬಲಿಸುತ್ತೇನೆ ಎಂದಿದ್ದಾರೆ ಅರ್ಜುನ್ ರಮೇಶ್.