ಮುಂಬೈ: ಅಫ್ಘಾನಿಸ್ತಾನದ ಸ್ಥಿತಿಗೆ ಮರುಗಿದ ಬಾಲಿವುಡ್ ನಟ ಸೋನು ಸೂದ್ ಅವರಿಗೆ ನಮ್ಮ ನೆರವು ಬೇಕಿದೆ ಎಂದಿದ್ದಾರೆ.
Also all the Indians who lived in Afghanistan all thier life and now are homeless, they need us.
It’s Now or Never.
Jai Hind ???????? https://t.co/tL9bhZQIJn
— sonu sood (@SonuSood) August 21, 2021
Advertisement
ಅಫ್ಘಾನಿಸ್ತಾನದ ಜನರಿಗೆ ಹಾಗೂ ಅಲ್ಲಿ ನೆಲಸಿರುವ ಭಾರತೀಯರ ನೆರವಿಗೆ ನಾವೆಲ್ಲರೂ ಧಾವಿಸಬೇಕು. ಅಫ್ಘಾನಿಸ್ತಾನ ಜನ ಈಗ ಅಕ್ಷರಶಃ ಬೀದಿಗೆ ಬಂದಿದ್ದಾರೆ. ಅಫ್ಘಾನಿಯರಿಗೆ ಕೆಲಸ ಮತ್ತು ಮನೆ ನೀಡುವ ಮೂಲಕ ಅವರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬರುವ ಅಫ್ಘಾನ್ನರಿಗೆ ತಾತ್ಕಾಲಿಕ ವೀಸಾ ವ್ಯವಸ್ಥೆ
Advertisement
The world should show the solidarity to Afghanistan by giving jobs and a good living to every Afghan family that became homeless.
— sonu sood (@SonuSood) August 21, 2021
Advertisement
ಅಫ್ಘಾನ್‍ನಲ್ಲಿರುವ ಭಾರತೀಯರ ಪರವಾಗಿ ಸಹ ಧ್ವನಿ ಎತ್ತಿರುವ ಸೋನುಸೂದ್ ಅಫ್ಘಾನಿಸ್ತಾನದಲ್ಲಿ ನೆಲಸಿರುವ ಭಾರತೀಯರು ಸಹ ಈಗ ನಿರಾಶ್ರಿತರಾಗಿದ್ದಾರೆ. ಅವರ ಬದುಕನ್ನು ಕಟ್ಟಿಕೊಳ್ಳಲು ನಾವೆಲ್ಲ ಸಹಾಯ ಮಾಡಬೇಕು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರಿಗೆ ನಮ್ಮ ಅವಶ್ಯಕತೆಯಿದೆ ಎಂದು ಸೋನುಸೂದ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಇನ್ನಿಲ್ಲ
Advertisement
ಅಫ್ಘಾನ್ ನಲ್ಲಿ ನಡೆಯುತ್ತಿರೋ ನರಮೇಧದಿಂದ ಹೈರಾಣಾಗಿರೋ ಅಫ್ಘಾನಿಸ್ತಾನದವರು ಭಾರತಕ್ಕೆ ಬರಲು ಇಚ್ಛಿಸುವವರಿಗೆ ಭಾರತದಿಂದ ತಾತ್ಕಾಲಿಕ ವೀಸಾದ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತಿದೆ. ಕರ್ನಾಟದಲ್ಲಿರೋ ಅಪ್ಘಾನ್ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರ ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಿದೆ.
ಈ ಹೆಲ್ಪ್ ಡೆಸ್ಕ್ ಗೆ ನಿರಂತರವಾಗಿ ವಿದ್ಯಾರ್ಥಿಗಳು ಕರೆ ಮಾಡಿ ನಮ್ಮ ಪೋಷಕರನ್ನ ಭಾರತ ಹಾಗೂ ಬೆಂಗಳೂರಿಗೆ ಕರಿಸಿಕೊಡುವಂತೆ ಮನವಿ ಮಾಡುತ್ತಿದ್ದರು. ಆ ಕಾರಣಕ್ಕಾಗಿ ತಾತ್ಕಾಲಿಕ ವೀಸಾ ಆನ್‍ಲೈನ್ ನಲ್ಲಿ ವೆಬ್‍ಸೈಟ್ ಮೂಲಕ ಅಪ್ಲೈ ಮಾಡಿ ತಾತ್ಕಾಲಿಕ ವೀಸಾ ಪಡೆದುಕೊಳ್ಳಲುವಂತೆ ಸಲಹೆ ಸೂಚನೆಯನ್ನ ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ.