ಮುಂಬೈ: ಬಾಲಿವುಡ್ ನಟ ಸೋನುಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಜನರ ಹೃದಯದಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಭಾರೀ ಸದ್ದು ಮಾಡುತ್ತಿರುವ ಸೋನು ಸೋದ್ ಅವರಿಗೆ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಆಗಾಗ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.
Advertisement
ಸದ್ಯ ಅಭಿಮಾನಿಯೊಬ್ಬರು ಸೋನ್ ಸೂದ್ ಮುಖವನ್ನು ಸಿಮ್‍ಕಾರ್ಡ್ ಮೇಲೆ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಸೋಮಿನ್ ಎಂಬವರು ಇತ್ತೀಚೆಗೆ ಸೋನು ಸೂದ್ ಅವರ ಮುಖವನ್ನು ಸಿಮ್ ಕಾರ್ಡ್‍ನಲ್ಲಿ ಚಿತ್ರಿಸಿದ್ದಾರೆ. ನಂತರ ಇದರ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಶೀರ್ಷಿಕೆಯಲ್ಲಿ ಸಿಮ್ ಕಾರ್ಡ್ ಮೇಲೆ ಪೇಂಟಿಂಗ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತೇನೆ – ಐಟಿ ಅಧಿಕಾರಿಗಳಿಗೆ ಹೇಳಿದ್ರಂತೆ ಸೋನು ಸೂದ್
Advertisement
Advertisement
ವಿಶೇಷವೆಂದರೆ ಅಭಿಮಾನಿಯ ಪೋಸ್ಟ್ ಗೆ ಸೋನು ಸೂದ್ ಪ್ರತಿಕ್ರಿಯಿಸಿದ್ದು, ಫ್ರೀ 10 ಜಿ ನೆಟ್‍ವರ್ಕ್ ಎಂದು ಸ್ಮೈಲಿ ಎಮೋಜಿ ಕಳುಹಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 6,000ಕ್ಕೂ ಅಧಿಕ ಲೈಕ್ಸ್ ಬಂದಿದ್ದು, 340 ರೀ ಟ್ವೀಟ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಇದನ್ನೂ ಓದಿ: ಪರ್ವತ ಹತ್ತಿ ಸಾಧನೆಗೈದು, ಸೋನು ಸೂದ್‍ಗೆ ಅರ್ಪಣೆ
Advertisement
Painting on sim card ????@SonuSood sir ❤️❤️@FcSonuSood @SonuSoodFcIndia pic.twitter.com/ZzwuRQLv8D
— somin ???????? (@sominz_artworkz) October 7, 2021
ಇತ್ತೀಚೆಗಷ್ಟೇ ಸೋನು ಸೂದ್ ಅವರ ಮನೆ, ಕಚೇರಿ ಸೇರಿದಂತೆ ಅವರಿಗೆ ಸಂಬಂಧಿಸಿದ ಅನೇಕ ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸೋನಿ ಸೂದ್ ಸುಮಾರು 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ
Free 10 G network ,???? https://t.co/uwUUSMBXLW
— sonu sood (@SonuSood) October 7, 2021
ನಂತರ, ಈ ಕುರಿತಂತೆ ಸೋನು ಸೂದ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‌ವೊಂದನ್ನು ಮಾಡಿ, ನಿಮ್ಮ ಕಥೆಯನ್ನು ನೀವು ಯಾವಾಗಲೂ ಹೇಳಬೇಕಾಗಿಲ್ಲ. ಅದಕ್ಕೆ ಸಮಯ ಬರುತ್ತದೆ. ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಶನ್‍ನಲ್ಲಿರು ಪ್ರತಿ ಒಂದು ರೂಪಾಯಿಯನ್ನು ಅಮೂಲ್ಯವಾದಂತಹ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಿಸಲು ಕಾಯುತ್ತಿದ್ದೇನೆ. ಅನೇಕ ವೇಳೆ ಮಾನವೀಯ ಕಾರ್ಯಗಳಿಗೆ ಹಣ ದಾನ ಮಾಡಲು ಬ್ರ್ಯಾಂಡ್‍ಗಳಿಗೆ ಜಾಹೀರಾತು ನೀಡುವ ಮೂಲಕ ಪ್ರೋತ್ಸಾಹಿಸಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನೀವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.