ಚಂಡೀಗಢ: ಕೊರೊನಾ ಸಂಕಷ್ಟದ ಕಾಲದಲ್ಲಿ ಅಭಿಮಾನಿಗಳ ಪಾಲಿಗೆ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರು ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ನೀಡುವ, ಮೊಗಾ ಕಿ ಭೇಟಿ (ಮೊಗಾದ ಮಗಳು) ಹೆಸರಿನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.
ಸಹೋದರಿ ಮಾಳವಿಕಾ ಸೂದ್ ಜೊತೆ ಸೇರಿ ಸೋನು ಸೂದ್ ತಮ್ಮ ಹುಟ್ಟೂರಾದ ಪಂಜಾಬ್‍ನ ಮೊಗಾದಲ್ಲಿ, 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್‍ಗಳನ್ನು ನೀಡಿದ್ದಾರೆ. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಿದೆ. ಸೂದ್ ಚಾರಿಟಿ ಫೌಂಡೇಶನ್‍ನೊಂದಿಗೆ ಮಾಳವಿಕಾ ಸೂದ್ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?
Advertisement
Advertisement
ಈ ಯೋಜನೆ ಕುರಿತಾಗಿ ಮಾತನಾಡಿದ ಸೋನು ಸೂದ್, ಮನೆಯಿಂದ ಶಾಲೆಗೆ ಹೋಗುವುದು ತುಂಬಾ ದೂರವಾಗಿದ್ದು, ವಿದ್ಯಾರ್ಥಿನಿಯರು ತೀವ್ರ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಸಹಾಯ ಮಾಡಲು 8ನೇ ತರಗತಿಯಿಂದ 12ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿನಿಯರಿಗೆ ಸೈಕಲ್‍ಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಅಭಿಯಾನದಲ್ಲಿ ಈ ಸೈಕಲ್‍ಗಳನ್ನು ಸಾಮಾಜಿಕ ಕಾರ್ಯಕರ್ತರಿಗೂ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸೋನು ಸೂದ್‌ರಿಂದ ರೈಫಲ್ ಗಿಫ್ಟ್ ಪಡೆದಿದ್ದ ಶೂಟರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Advertisement
Advertisement
ಸೋನು ಸೂದ್ ಅವರು ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕೋವಿಡ್ ಮೊದಲನೆ ಅಲೆ ಕಾಣಿಸಿಕೊಂಡಾಗ ಸೋನು ಸಾಮಾಜಿಕ ಕೆಲಸ ಆರಂಭಿಸಿದ್ದರು. ಆ ಬಳಿಕ ಅವರು ಒಂದಾದ ಮೇಲೆ ಒಂದರಂತೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತ ನೊಂದವರ ಪಾಲಿನ ದೇವರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.