BollywoodCinemaLatestMain Post

ತಮಿಳು ಅತ್ಯಂತ ಪ್ರಾಚೀನ ಭಾಷೆ : ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ ಎಂದ ಸೋನು ನಿಗಮ್

ಬಾಲಿವುಡ್ ಗಾಯಕ ಮತ್ತು ಪದ್ಮಶ್ರೀ ಪುರಸ್ಕೃತ ಸೋನು ನಿಗಮ್ ಈಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಅವರ ಹಿಂದಿ ರಾಷ್ಟ್ರ ಭಾಷಾ ಚರ್ಚೆಯ ವಿಚಾರವಾಗಿ ದೇಶದಲ್ಲಿ ಅರಾಜಕತೆಯನ್ನು ಏಕೆ ಸೃಷ್ಟಿಸಬೇಕು ಎಂದು ಸೋನು ಕಿಡಿಕಾರಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನನ್ನ ಜ್ಞಾನದ ಪ್ರಕಾರ, ಭಾರತದ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ದಾಖಲಿಸಿಲ್ಲ. ಈ ಬಗ್ಗೆ ನಾನು ತಜ್ಞರನ್ನೂ ಸಂಪರ್ಕಿಸಿದ್ದೇನೆ. ಹಿಂದಿ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ. ತಮಿಳು ಭಾಷೆಯು ಅತ್ಯಂತ ಹಳೆಯ ಭಾಷೆ ಎಂದು ನಮಗೆ ತಿಳಿದಿದೆ. ಸಂಸ್ಕೃತ ಮತ್ತು ತಮಿಳು ನಡುವೆ ಚರ್ಚೆ ನಡೆಯುತ್ತಿದೆ. ಇಡೀ ಪ್ರಪಂಚದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆ ಆಗಿದೆ ಎಂದು ಜನರು ಹೇಳುತ್ತಾರೆ’ ಎಂದಿದ್ದಾರೆ ಸೋನು. ಇದನ್ನೂ ಓದಿ: ಭಾಷಾ ವಿಚಾರದಲ್ಲಿ ದೇಶ ಒಡೆಯಲಾಗುತ್ತಿದೆ : ಗಾಯಕ ಸೋನು ನಿಗಂ ಕಿಡಿಕಿಡಿ

ಮುಂದುವರೆದು ಮಾತನಾಡಿರುವ ಅವರು, ‘ನೀವು ತಮಿಳಿಗರು, ನೀವು ಹಿಂದಿಯಲ್ಲಿ ಮಾತನಾಡಬೇಕು ಎಂದು ಇತರರ ಮೇಲೆ ಭಾಷೆಯನ್ನು ಹೇರುವ ಮೂಲಕ ನಾವು ದೇಶದಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತಿದ್ದೇವೆ ಎಂದ ಅವರು, ಪಂಜಾಬಿಗರು ಪಂಜಾಬಿ ಮಾತನಾಡಬೇಕು, ತಮಿಳಿಗರು ತಮಿಳು ಮಾತನಾಡಬೇಕು. ಇಂಗ್ಲಿಷಿನಲ್ಲಿ ಮಾತನಾಡಲು ಇಚ್ಚಿಸುವುದಾದರೆ ಅವರು ಆ ಭಾಷೆಯಲ್ಲಿ ಮಾತನಾಡಲಿ ಬಿಟ್ಟುಬಿಡಿ. ನಮ್ಮ ನ್ಯಾಯಾಲಯಗಳಲ್ಲಿಯೂ ತೀರ್ಪುಗಳು ಇಂಗ್ಲಿಷ್‍ನಲ್ಲಿಯೇ ಬರುತ್ತವೆ’ ಎಂದು ಮಾರ್ಮಿಕವಾಗಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

 

Leave a Reply

Your email address will not be published.

Back to top button