ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಎರಡನೇ ವಾರದ ನಾಮಿನೇಷನ್ ಜಟಾಪಟಿ ಜೋರಾಗಿದೆ. ಇದೀಗ ಸ್ಪರ್ಧಿ ಜಶ್ವಂತ್ ಕೆಂಗಣ್ಣಿಗೆ ಸೋನು ಗೌಡ ಗುರಿಯಾಗಿದ್ದಾರೆ. ತನ್ನ ಗರ್ಲ್‌ಫ್ರೆಂಡ್ ತಂಟೆಗೆ ಬಂದ ಸೋನು ಗೌಡ ವಿರುದ್ಧ ಜಶ್ವಂತ್ ತರಾಟೆಗೆ ತೆಗೆದುಕೊಂಡಿದ್ದಾರೆ.
ದೊಡ್ಮನೆಯಲ್ಲಿ ಎರಡನೇ ವಾರದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮ್ಯೂಸಿಕ್ ಚೇರ್ ರೀತಿಯೇ ಒಂದು ಗೇಮ್ ನಡೆದಿತ್ತು. ಈ ಗೇಮ್‌ನಲ್ಲಿ ಸೋನುಗೆ ಒಂದು ಲೆಟರ್ ಸಿಕ್ಕಿದೆ. ಈ ಲೇಟರ್ ಮೂಲಕ ಅವರು ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ನಾನು ನಂದು ಅವರನ್ನು ನಾಮಿನೇಟ್ ಮಾಡುತ್ತೇನೆ. ಅವರು ಸಖತ್ ಆಗಿ ಆಡುತ್ತಾರೆ. ನನಗೆ ಟಫ್ ಕಾಂಪಿಟೇಟರ್ ಅನಿಸಿತು. ಈ ಕಾರಣಕ್ಕೆ ಅವರ ಹೆಸರನ್ನು ತೆಗೆದುಕೊಂಡೆ ಎಂದು ಸೋನು ಗೌಡ ಕಾರಣ ನೀಡಿದರು. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಯ್ತು ‘ಸಲಾರ್’ ಚಿತ್ರದ ಪೋಸ್ಟರ್
ಬಳಿಕ ಮತ್ತೊಂದು ಆಟದಲ್ಲಿ ಗೆದ್ದು ಜಶ್ವಂತ್ ಅವರು ಸೋನು ಅವರನ್ನು ನಾಮಿನೇಟ್ ಮಾಡಿದರು. ಸೋನು ಅವರು ಮನೆಯವರೊಂದಿಗೆ ಜೊತೆ ಬೆರೆಯುತ್ತಿಲ್ಲ. ಇದರ ಜತೆಗೆ ಅವರು ನನ್ನ ಗರ್ಲ್‌ಫ್ರೆಂಡ್ ಅನ್ನು ನಾಮಿನೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದರು. ಈ ಮೂಲಕ ಅವರು ಸೇಡು ತೀರಿಸಿಕೊಂಡರು.
ಇನ್ನು ಸೋನು ಗೌಡ ಬಿಗ್ ಬಾಸ್ ಬಂದಿದ್ದಕ್ಕೆ ಗ್ರ್ಯಾಂಡ್ ಲಾಂಚ್ ವೇಳೆಯೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಮೊದಲ ವಾರದಲ್ಲಿ ಕೂಡ ಸೋನು ನಾಮೀನೇಟ್ ಆಗಿದ್ದರು. ಆದರೆ ಮೊದಲ ವಾರ ಸೇಫ್ ಆಗಿ, ಮಾಡೆಲ್ ಕಿರಣ್ ಮನೆಯಿಂದ ಹೊರನಡೆದರು. ಈಗ ಎರಡನೇ ವಾರ ನಾಮಿನೇಟ್ ಆಗಿರುವ ಸೋನು, ಈ ವಾರವೂ ಸೇಫ್ ಆಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.