ಸ್ಯಾಂಡಲ್ವುಡ್ನಲ್ಲಿ ಇಂತಿ ನಿನ್ನ ಪ್ರೀತಿಯ, ಗುಳ್ಟು, ಯುವರತ್ನ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಸೋನು ಗೌಡ, ಇದೀಗ ಚಾಲೆಂಜಿಂಗ್ ಪಾತ್ರದ ಮೂಲಕ ಮನಗೆಲ್ಲಲು ಸಜ್ಜಾಗಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡದ ನಾಯಕಿಯರು ಇತ್ತೀಚಿನ ದಿನಗಳಲ್ಲಿ ಭಿನ್ನ, ಚಾಲೆಂಜಿಂಗ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಸೋನು ಗೌಡ ಸಹ ಸೇರಿಕೊಂಡಿದ್ದಾರೆ. ಈಗಾಗಲೇ ವಿಭಿನ್ನ ಪಾತ್ರದ ಮೂಲಕ ರಂಜಿಸಿರೋ ಸೋನು ಗೌಡ, ಇದೇ ಮೊದಲ ಬಾರಿಗೆ ಎಂದೂ ಮಾಡಿರದ ಲೈಂಗಿಕ ಕಾರ್ಯಕರ್ತೆಯ ಪಾತ್ರಕ್ಕೆ ಸೋನು ಜೀವ ತುಂಬಲಿದ್ದಾರೆ. ಇದನ್ನೂ ಓದಿ: ತನ್ನ ದೇಹದ ಮೇಲಾದ ದೌರ್ಜನ್ಯವನ್ನು ಇಂಚಿಂಚು ಬರೆದಿಟ್ಟ ನಟಿ, ಬರಹಗಾರ್ತಿ ಕುಬ್ರಾ ಸೇಠ್
ಬಹುಭಾಷಾ ನಟಿ ಸೋನು ಗೌಡ ಇದುವರೆಗೂ ಲವ್ ಸ್ಟೋರಿ, ಥ್ರಿಲ್ಲರ್, ಸಾಮಾಜಿಕ ಕಳಕಳಿಯ ಚಿತ್ರ ಹೀಗೆ ಹಲವು ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗ ಯುವಧೀರ ನಿರ್ದೇಶನದ `ಗುಡ್ ಗುಡ್ಡರ್ ಗುಡ್ಡೆಸ್ಟ್’ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಸೋನು ಅವರನ್ನು ಹೊಸ ಬಗೆಯ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.