ಶಿಮ್ಲಾ: ಸೋನಿಯಾ ಗಾಂಧಿ (Sonia Gandhi) – ಮನಮೋಹನ್ ಸಿಂಗ್ (Manmohan Singh) ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ (Amit Shah) ಗಂಭೀರ ಆರೋಪಿಸಿದ್ದಾರೆ.
“Guarantees of only those people are believed…” Amit Shah takes on Congress ’10 guarantees’ in Himachal manifesto
Read @ANI Story | https://t.co/x6rXnNWf96#HimachalPradeshElections #BJPManifesto #AmitShah pic.twitter.com/TPLPGToEEc
— ANI Digital (@ani_digital) November 6, 2022
Advertisement
ಹಿಮಾಚಲ ಪ್ರದೇಶದ ಚುನಾವಣಾ (HimachalPradeshElections) ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 10 ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸೋನಿಯಾ ಗಾಂಧಿ-ಮನಮೋಹನ್ ಸಿಂಗ್ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಈಗ ಮತ್ತೆ ಹಿಮಾಚಲದಲ್ಲಿ (Himachal Pradesh) ಅಮಾಯಕರಿಗೆ ಭರವಸೆಗಳನ್ನ ನೀಡುತ್ತಿದ್ದಾರೆ. ನಿಮ್ಮ ಗ್ಯಾರೆಂಟಿಯನ್ನು ಇಲ್ಲಿ ಯಾರೂ ನಂಬುವುದಿಲ್ಲ ಎಂದು ಶಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ
Advertisement
When I was coming here, I saw a rally of the Congress candidate. The venue mentioned some ’10 guarantees’. Guarantees of only those people are believed who have some record. Who will believe in your guarantees?: HM Amit Shah in Nagrota, Kangra#HimachalPradeshElections pic.twitter.com/hEQFjEyssj
— ANI (@ANI) November 6, 2022
Advertisement
ನಾನು ಇಲ್ಲಿಗೆ ಬರುವ ಮುನ್ನ ಕಾಂಗ್ರೆಸ್ ರ‍್ಯಾಲಿ ನೋಡಿದೆ. ಕಾಂಗ್ರೆಸ್ (Congress) ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿ, 1 ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿ, ಯುವಕರಿಗೆ 5 ಲಕ್ಷ ಉದ್ಯೋಗಗಳು, ಸ್ಟಾರ್ಟ್ ಅಪ್‌ಗೆ 680 ಕೋಟಿ ರೂ. ಹೂಡಿಕೆ, ಮಹಿಳೆಯರಿಗೆ ತಿಂಗಳಿಗೆ 1,500 ರೂ. ಸಹಾಯಧನ, 300 ಯೂನಿಟ್ ಉಚಿತ ವಿದ್ಯುತ್ ಸೇರಿ 10 ಭರವಸೆಗಳನ್ನ ನೀಡಿದೆ. ಇದನ್ನು ಯಾರು ತಾನೆ ನಂಬುತ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ಅಭ್ಯರ್ಥಿ ಪರೀಕ್ಷೆಯಿಂದ ವಂಚಿತ
Advertisement
There was Sonia-Manmohan govt for 10 years during which corruption of Rs 12 Lakh Crores happened and today they are giving guarantees to the innocent people of Himachal. Nobody here believes in your guarantee: HM Amit Shah in Nagrota, Kangra#HimachalPradeshElections pic.twitter.com/T88OUUtMT5
— ANI (@ANI) November 6, 2022
ಮನಮೋಹನ್ ಸಿಂಗ್ (Manmohan Singh) ಅಧಿಕಾರದಲ್ಲಿದ್ದಾಗ, ಪಾಕಿಸ್ತಾನದ (Pakistan) ಭಯೋತ್ಪಾದಕರು ನಮ್ಮ ದೇಶಕ್ಕೆ ನುಗ್ಗಿ ಸೈನಿಕರ ಶಿರಚ್ಛೇದ ಮಾಡಿ ಅಗೌರವ ತೋರಿದ್ದರು. ಆದರೂ ದೇಶದ ಪ್ರಧಾನಿಯಾದವರು ಸುಮ್ಮನಿರುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪುಲ್ವಾಮಾ ದಾಳಿ ಪ್ರತಿಕಾರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ, ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಹೊಗಳಿದರು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಅನ್ನುತ್ತಿದ್ದಾರೆ. ಆದರೆ ಉತ್ತರಾಖಂಡ, ಉತ್ತರಪ್ರದೇಶ, ಅಸ್ಸಾಂ ಹಾಗೂ ಮಣಿಪುರದ ಚುನಾವಣೆಗಳನ್ನು ನೋಡಿ, ಅಭಿಪ್ರಾಯ ಬದಲಾಗಿದೆ. ಬಿಜೆಪಿ (BJP) ಒಮ್ಮೆ ಅಧಿಕಾರಕ್ಕೆ ಬಂದರೆ, ಮತ್ತೆ-ಮತ್ತೆ ಬರುತ್ತದೆ ಎಂದ ಅವರು, ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.