ನವದೆಹಲಿ: ಮೂರು ತಿಂಗಳ ಅವಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರವನ್ನು ಸೆಪ್ಟೆಂಬರ್ ವರೆಗೂ ಮುಂದುವರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
ಎರಡು ಪುಟಗಳ ಪತ್ರ ಬರೆದಿರುವ ಸೋನಿಯಗಾಂಧಿ ಲಾಕ್‍ಡೌನ್ ನಿಂದ ಜನರು ಸಂಕಷ್ಟಕ್ಕೆ ಸಿಗಲಿದ್ದು ಕೇಂದ್ರ ಸರ್ಕಾರ ಉಚಿತ ಪಡಿತರ ನೀಡುತ್ತಿರುವುದು ಉತ್ತಮ ಕೆಲಸ. ಯಾರೂ ಕೂಡಾ ಮುಂದಿನ ದಿನಗಳಲ್ಲಿ ಹಸಿವಿನಿಂದ ಇರಬಾರದು. ಈ ಹಿನ್ನೆಲೆ ಸೆಪ್ಟೆಂಬರ್ ವರೆಗೂ ಉಚಿತ ಪಡಿತರ ನೀಡುವುದನ್ನ ವಿಸ್ತರಿಸಿ ಎಂದು ಮನವಿ ಮಾಡಿದ್ದಾರೆ.
Advertisement
Advertisement
ಆಹಾರ ಭದ್ರತೆ ಕಾಯ್ದೆಯಡಿ 5 ಕೆಜಿ ಬದಲಿಗೆ 10 ಕೆಜಿ ಗೋಧಿ ಅಥವಾ ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ನೀಡಿದರೆ ದೀರ್ಘ ಕಾಲದವರೆಗೂ ಜನರಿಗೆ ಉಪಯೋಗವಾಗಲಿದೆ. ಲಾಕ್‍ಡೌನ್ ನಿಂದ ಸುರಕ್ಷಿತ ಕುಟುಂಬಗಳು ಕೂಡಾ ಅಭದ್ರತೆಗೆ ಸಿಲುಕಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Advertisement
Congress President Smt. Sonia Gandhi writes to PM Modi suggesting measures to ensure food security for people affected by the lockdown & impact of COVID-19. pic.twitter.com/euYtgQ9cwE
— Congress (@INCIndia) April 13, 2020
Advertisement
The BJP govt should shed its ego & listen to those with far more experience & knowledge.#ActNowSaveEconomy pic.twitter.com/WKBK4wXKPG
— Congress (@INCIndia) April 13, 2020