ಬೆಂಗಳೂರು: ಕಾಂಗ್ರೆಸ್ (Congress) ಅಧಿನಾಯಕಿ ಸೋನಿಯಾ ಗಾಂಧಿ ಮೂರು ದಿನ ರಾಜ್ಯ ಪ್ರವಾಸದಲ್ಲಿದ್ರೂ ಯಾವ ನಾಯಕರಿಗೂ ತಮ್ಮ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂಬ ಮಾಹಿತಿ ಲಭಿಸಿದೆ.
ಸೋನಿಯಾ ಗಾಂಧಿಯವರ ಈ ಪ್ರತಿ ಹೆಜ್ಜೆಗಳಲ್ಲೂ
ದೃಢತೆ ಇದೆ,
ವಿಶ್ವಾಸವಿದೆ,
ತಾಳ್ಮೆ ಇದೆ,
ಛಲವಿದೆ,
ಬದ್ಧತೆ ಇದೆ,
ಸ್ಪಷ್ಟತೆ ಇದೆ,
ತ್ಯಾಗವಿದೆ,
ವಾತ್ಸಲ್ಯವಿದೆ,
ಕರುಣೆ ಇದೆ,
ತಾಯ್ತನದ ಮಮತೆ ಇದೆ,
ದೇಶದೆಡೆಗೆ ಅಪರಿಮಿತ ಪ್ರೇಮವಿದೆ,
ಅವಮಾನಗಳನ್ನು ಸಹಿಸುವ ಪ್ರಬುದ್ಧತೆ ಇದೆ,#BharatJodoYatra #BharatJodoWithSoniaGandhi pic.twitter.com/4jEByYTzEN
— Karnataka Congress (@INCKarnataka) October 6, 2022
Advertisement
ಹೌದು ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಜ್ಯಕ್ಕೆ ಬಂದ ಸೋನಿಯಾ ಗಾಂಧಿ ರಾಜ್ಯದ ಯಾವ ಪ್ರಮುಖ ನಾಯಕರಿಗೂ ವೈಯಕ್ತಿಕ ಭೇಟಿಗೆ ಅವಕಾಶ ನೀಡಿಲ್ಲ. ಆ ಮೂಲಕ ಭಾರತ್ ಜೋಡೋ ಯಾತ್ರೆ ಬಿಟ್ಟರೆ ರಾಜ್ಯ ಕಾಂಗ್ರೆಸ್ ನಲ್ಲಿ ಬೇರೆ ಯಾವುದಕ್ಕೂ ಅವಕಾಶ ಇಲ್ಲಾ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
Advertisement
"ಐತಿಹಾಸಿಕ ಕ್ಷಣ"
ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಹೆಜ್ಜೆ ಹಾಕಿದರು,
ಭವ್ಯ ಭಾರತದೆಡೆಗೆ ಅವರಿಗಿರುವ ಪ್ರೀತಿ, ಅಭಿಮಾನ, ಬದ್ಧತೆಗಳಿಗೆ ವಯಸ್ಸು, ಆಯಾಸ, ಅನಾರೋಗ್ಯ ಯಾವುದೂ ಅಡ್ಡಿಯಾಗುವುದಿಲ್ಲ.
ಅನಾರೋಗ್ಯದಲ್ಲೂ ಅವರ ಈ ಉತ್ಸಾಹವು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದೆ.#BharatJodoYatra pic.twitter.com/NTIXxZA0Mg
— Karnataka Congress (@INCKarnataka) October 6, 2022
Advertisement
ಸದ್ಯಕ್ಕೆ ಏನಿದ್ದರೂ ಮೊದಲ ಆಧ್ಯತೆ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatre) ಯ ಯಶಸ್ಸು. ಆನಂತರ ಚುನಾವಣೆಯಲ್ಲಿ ಗೆಲುವಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು. ಈ ಜವಾಬ್ದಾರಿಯನ್ನು ಕಾಂಗ್ರೆಸ್ (Congress) ನ ಎಲ್ಲಾ ನಾಯಕರು ಸಾಮೂಹಿಕವಾಗಿ ನಿರ್ವಹಿಸಬೇಕು. ಅದನ್ನ ಮೀರಿ ಏನಾದರು ಮಾತನಾಡುವುದು ಇದ್ದರೆ ಅದು ದೆಹಲಿಯಲ್ಲಿ ಅಷ್ಟೆ. ಇಂತದೊಂದು ಸ್ಪಷ್ಟ ಸಂದೇಶವನ್ನ ಸೋನಿಯಾ ಗಾಂಧಿ (Sonia Gandhi) ರವಾನಿಸಿದ್ದಾರೆ ಎನ್ನಲಾಗುತ್ತಿದೆ.
Advertisement
Padyatris continue to march forward as more and more people join hands.
Congress President Smt. Sonia Gandhi ji's participation in the Bharat Jodo Yatra has given new strength to the mission.#BharatJodoWithSoniaGandhi pic.twitter.com/Eo9nFt9Fjk
— Karnataka Congress (@INCKarnataka) October 6, 2022
ಸ್ವತಃ ಎಐಸಿಸಿ ಹೈಕಮಾಂಡ್ ರಾಜ್ಯದಲ್ಲಿ 3 ದಿನ ಉಳಿದುಕೊಂಡರೂ ರಾಜ್ಯದ ಯಾವ ನಾಯಕರಿಗೂ ಭೇಟಿಗೆ ಅವಕಾಶ ನೀಡದೆ ಅಂತರ ಕಾಯ್ದುಕೊಂಡಿರುವುದು ವಿಶೇಷವಾಗಿದೆ.