ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು 2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರಾಗುವಂತೆ ನನ್ನನ್ನು ಕೇಳಿದ್ದರು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.
ಈಶಾನ್ಯ ಭಾಗದ ಕಾಂಗ್ರೆಸ್ (Congress) ಸದಸ್ಯರನ್ನುದ್ದೇಶಿಸಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2005ರಲ್ಲಿ ಸೋನಿಯಾ ಗಾಂಧಿಯವರು ತಮ್ಮನ್ನು ಸಭೆಗೆ ಕರೆದು, ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವಂತೆ ಕೇಳಿಕೊಂಡಿದ್ದರು. ಅಲ್ಲದೇ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥರಾಗಲು ಅವರು ನನ್ನ ಹೆಸರನ್ನು ಮೂರು ಬಾರಿ ಸೂಚಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 2ನೇ ದಿನವೂ ಒತ್ತುವರಿ ತೆರವು- ಕೆಆರ್‌ಪುರ, ಮಹದೇವಪುರದಲ್ಲಿ ಆಪರೇಷನ್
Advertisement
Advertisement
ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಇರುವ ಬೆನ್ನೆಲೆ ತಮ್ಮ ರಾಜಕೀಯ ಪಯಣದ ಬಗ್ಗೆ ಖರ್ಗೆ ಈ ರೀತಿಯೆಲ್ಲಾ ಮಾತನಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಇದನ್ನೂ ಓದಿ: ಕಾಶಿ ಮಾದರಿಯಲ್ಲೇ ಉಜ್ಜೈನಿ ಮಹಾಕಾಲೇಶ್ವರ ಅಭಿವೃದ್ಧಿ- ಜ್ಯೋತಿರ್ಲಿಂಗಕ್ಕೆ ಮೋದಿ ಪೂಜೆ