– 75% ಅನುದಾನವನ್ನ ವೋಟ್ ಬ್ಯಾಂಕ್‍ಗೆ ನೀಡಿದ್ದಾರೆಂದು ಆರೋಪ
ಲಕ್ನೋ: ಸೋನಿಯಾ ಗಾಂಧಿಯವರು (Sonia Gandhi) ಸಂಸದರಿಗೆ ನೀಡಲಾಗುವ ನಿಧಿಯಲ್ಲಿ (MP Funds) 70% ಗಿಂತಲೂ ಹೆಚ್ಚಿನ ಹಣವನ್ನು ಅಲ್ಪಸಂಖ್ಯಾತರಿಗೆ ವ್ಯಯಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Advertisement
ರಾಯ್ ಬರೇಲಿಯಲ್ಲಿ (Rae Bareli) ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಿಂದ ಗಾಂಧಿ ಕುಟುಂಬಕ್ಕೆ ಹಲವು ವರ್ಷಗಳಿಂದ ಮತ ನೀಡಿದ್ದೀರಿ. ಇಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ನಿಮ್ಮ ಸುಖ-ದುಃಖದಲ್ಲಿ ಕಾಂಗ್ರೆಸ್ ಭಾಗಿಯಾಗುವುದಿಲ್ಲ. ನಾವು ಈ ಕ್ಷೇತ್ರವನ್ನು ಪ್ರಧಾನಿ ಮೋದಿಯವರ (Narendra Modi) ಅಭಿವೃದ್ಧಿಯ ಪಟ್ಟಿಗೆ ಸೇರಿಸುತ್ತೇವೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ, ಪೂರ್ವ ಭಾರತವನ್ನು ಅಭಿವೃದ್ಧಿಪಡಿಸಬೇಕು – ಮೋದಿ
Advertisement
ಕಾಂಗ್ರೆಸ್‍ನ (Congress) ರಾಜಕುಮಾರ (ರಾಹುಲ್ ಗಾಂಧಿ) ಮತ ಕೇಳಲು ಇಲ್ಲಿಗೆ ಬರುತ್ತಾರೆ. ಹಲವು ವರ್ಷಗಳಿಂದ ನೀವು ಗಾಂಧಿ ಕುಟುಂಬಕ್ಕೆ ಮತ ಹಾಕುತ್ತಿದ್ದೀರಿ. ಸಂಸದರ ನಿಧಿಯಿಂದ ಏನಾದರೂ ಪಡೆದಿದ್ದೀರಾ? ನೀವು ಏನನ್ನೂ ಪಡೆದಿಲ್ಲ ಎಂದಾದರೆ ಅದು ಎಲ್ಲಿಗೆ ಹೋಗಿದೆ? ಅದು ಅವರ ವೋಟ್ ಬ್ಯಾಂಕ್‍ಗೆ ಹೋಗಿದೆ. ಸಂಸದರ ನಿಧಿಯನ್ನು ಸೋನಿಯಾ ಗಾಂಧಿಯವರು ಅಲ್ಪಸಂಖ್ಯಾತರಿಗಾಗಿ ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Advertisement
Advertisement
ಗಾಂಧಿ ಕುಟುಂಬದವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು, ಈಗ ಪ್ರತಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ. ಹಣ ನೀಡುವುದಾಗಿ ಘೋಷಿಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಪ್ರತಿ ಮಹಿಳೆಗೆ 15,000 ರೂ. ಹಣ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 1,500 ರೂ. ಹಣವನ್ನು ಅವರು ನೀಡಿಲ್ಲ ಎಂದು ಕುಟುಕಿದ್ದಾರೆ.
ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸೋನಿಯಾ ಗಾಂಧಿಯವರ ಬದಲು ರಾಹುಲ್ ಗಾಂಧಿ ಕಣಕ್ಕಿಳಿದಿದ್ದಾರೆ. ಮೇ 20ರಂದು ಚುನಾವಣೆ ಐದನೇ ಹಂತದಲ್ಲಿ ಇಲ್ಲಿ ನಡೆಯಲಿದೆ. ಇದನ್ನೂ ಓದಿ: 2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್ ಬೆದರಿಕೆ – ದೆಹಲಿ ಪೊಲೀಸರು ಹೈ ಅಲರ್ಟ್