ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಎಐಸಿಸಿ ರಾಹುಲ್ ಗಾಂಧಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಹಾಡಿ ಹೊಗಳಿದ ಬೆನ್ನಲ್ಲೇ ಯುಪಿಎ ಮೈತ್ರಿ ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಚಿವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ದೇಶದ ಮೂಲಸೌಕರ್ಯದ ಅಭಿವೃದ್ಧಿ ಕಾರ್ಯದಲ್ಲಿ ನಿತಿನ್ ಗಡ್ಕರಿ ಅವರ ಕಾರ್ಯ ‘ವಂಡರ್ಫುಲ್’ ಎಂದು ಬಿಜೆಪಿ ಸಂಸದ ಗಣೇಶ್ ಸಿಂಗ್ ಹಾಡಿ ಹೊಗಳಿದ್ದರು. ಇದಕ್ಕೆ ಸೋನಿಯಾ ಗಾಂಧಿ ಕೂಡ ಸಾಥ್ ನೀಡಿದರು.
ಸದನದ ಪ್ರಶ್ನಾವಳಿ ಸಮಯದಲ್ಲಿ ಸಮಯದಲ್ಲಿ ನಿತಿನ್ ಗಡ್ಕರಿ ಅವರ ಸಚಿವ ಖಾತೆ ಬಗ್ಗೆ ಎರಡು ಪ್ರಶ್ನೆಗಳ ಬಗ್ಗೆ ಉತ್ತರಿಸಿ ಮಾತನಾಡಿದ್ದರು. ಈ ಬಗ್ಗೆ ಸಚಿವರು ಸಂಪೂರ್ಣವಾದ ಮಾಹಿತಿಯನ್ನು ಸದನದ ಮುಂದೇ ಪ್ರಸ್ತುತ ಪಡಿಸಿದ್ದರು. ಅಲ್ಲದೇ ರಾಜಕೀಯ ಸಂಬಂಧಗಳನ್ನು ಹೊರತು ಪಡಿಸಿ ನನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಎಲ್ಲಾ ಸಂಸತ್ ಸದಸ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದ್ದರು. ಇದನ್ನು ಓದಿ: ನಿತಿನ್ ಗಡ್ಕರಿಯನ್ನ ಹೊಗಳಿದ್ರು ರಾಹುಲ್ ಗಾಂಧಿ!
ಗಡ್ಕರಿ ಅವರ ಉತ್ತರ ಪೂರ್ಣವಾಗುತ್ತಿದಂತೆ ಬಿಜೆಪಿಯ ಎಲ್ಲಾ ಸಂಸದರು ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದ ಸೋನಿಯಾ ಗಾಂಧಿ ಹಾಗೂ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಮೇಜು ಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv