ನವದೆಹಲಿ: ನಮ್ಮ ಪ್ರಜಾಪ್ರಭುತ್ವವನ್ನು ಹ್ಯಾಕ್ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದಾರೆ.
ಫೇಸ್‍ಬುಕ್ ಮತ್ತು ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ದೇಶದಲ್ಲಿ ರಾಜಕೀಯ ಕಾರ್ಯಕ್ಕೆ ಬಳಸಲಾಗುತ್ತಿದೆ. ಜಾಗತಿಕ ಸೋಶಿಯಲ್ ಮೀಡಿಯಾ ಕಂಪನಿಗಳು ಎಲ್ಲಾ ಪಕ್ಷಗಳಿಗೆ ಸರಿಯಾದ ವೇದಿಕೆ ಒದಗಿಸುತ್ತಿಲ್ಲ. ಈ ವಿಚಾರ ಪದೇ ಪದೇ ಸಾರ್ವಜನಿಕರ ಗಮನಕ್ಕೆ ಬರುತ್ತಿದೆ. ಫೇಸ್‍ಬುಕ್ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕದಡುತ್ತಿದೆ ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದಿದ್ದಾರೆ.
Advertisement
Thank you for allowing me to take up issue of paramount importance – rising danger of social media being abused to hack our democracy. Global companies like FB & Twitter are used increasingly to shape political narratives by leaders, parties & their proxies: Sonia Gandhi in LS pic.twitter.com/YfnJFMW49D
— ANI (@ANI) March 16, 2022
ಭಾವನಾತ್ಮಕ ಹೇಳಿಕೆಗಳಿಂದ ಯುವ ಮತ್ತು ಹಿರಿಯ ಮನಸ್ಸುಗಳಲ್ಲಿ ದ್ವೇಷ ತುಂಬಲಾಗುತ್ತಿದೆ. ಇಂತಹ ಪ್ರಾಕ್ಸಿ ಜಾಹೀರಾತು ಕಂಪನಿಗಳು ಅದರ ಬಗ್ಗೆ ತಿಳಿದಿವೆ. ಅಷ್ಟೇ ಅಲ್ಲದೆ ಅದರಿಂದ ಲಾಭ ಪಡೆಯುತ್ತಿವೆ ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ
Advertisement
I urge Govt to put an end to systematic influence and interference of FB & other social media giants in electoral politics of the world’s largest democracy. This is beyond parties & politics. We need to protect our democracy & social harmony regardless of who’s in power: S Gandhi pic.twitter.com/xY4mERlTm6
— ANI (@ANI) March 16, 2022
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಜಕೀಯದಲ್ಲಿ, ಫೇಸ್‍ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ವ್ಯವಸ್ಥಿತ ಪ್ರಭಾವ ಮತ್ತು ಹಸ್ತಕ್ಷೇಪವನ್ನು ಕೊನೆಗೊಳಿಸಬೇಕು. ಇದು ಪಕ್ಷಗಳು ಮತ್ತು ರಾಜಕೀಯವನ್ನು ಮೀರಿದೆ. ಯಾರೇ ಅಧಿಕಾರದಲ್ಲಿದ್ದರೂ ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ನಾವು ರಕ್ಷಿಸಬೇಕಾಗಿದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ