ಮುಂಬೈ: ಗಾಂಧಿ ಜಯಂತಿ ಅಂಗವಾಗಿ ಮಹಾರಾಷ್ಟ್ರದ ವಾರ್ಧಾದಲ್ಲಿ ಹಮ್ಮಿಕೊಂಡಿದ್ದ ಸೇವಾಗ್ರಾಮದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ವತಃ ತಮ್ಮ ತಟ್ಟೆಯನ್ನು ತೊಳೆದಿದ್ದಾರೆ.
ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಮಹಾರಾಷ್ಟ್ರದ ವಾರ್ಧಾ ಬಳಿಯಿರುವ ಸೇವಾಗ್ರಾಮದ ಆಶ್ರಮದಲ್ಲಿ ಪ್ರಾರ್ಥನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಆಗಮಿಸಿದ್ದರು.
Advertisement
#WATCH: Sonia Gandhi and Rahul Gandhi wash their plates after lunch in Sevagram (Bapu Kuti) in Wardha. #Maharashtra pic.twitter.com/hzC3AGe7kj
— ANI (@ANI) October 2, 2018
Advertisement
ಪ್ರಾರ್ಥನಾ ಸಭೆಯ ಬಳಿಕ ಮಧ್ಯಾಹ್ನ ಭೋಜನ ಕೂಟ ಹಮ್ಮಿಕೊಳ್ಳಲಾಗಿತ್ತು. ಊಟ ಮುಗಿದ ನಂತರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಸ್ವತಃ ಊಟ ಮಾಡಿದ ತಟ್ಟೆಗಳನ್ನು ತೊಳೆಯುವ ಮೂಲಕ ಗಾಂಧೀಜಿಯವರ ಸರಳತೆಯನ್ನು ತೋರಿಸಿದ್ದಾರೆ.
Advertisement
ಗಾಂಧೀಜಿಯವರು ತಮ್ಮ ಜೀವಿತದ ಕೊನೆಯ ವರ್ಷಗಳನ್ನು ಈ ಸೇವಾಗ್ರಾಮದ ಆಶ್ರಮದಲ್ಲಿ ಕಳೆದಿದ್ದರು. ಹೀಗಾಗಿ ಈ ಆಶ್ರಮದಲ್ಲಿಯೇ ಪ್ರಾರ್ಥನ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ಸಿನ ಹಿರಿಯ ನಾಯಕರು ಭಾಗವಹಿಸಿದ್ದರು.
Advertisement
1986 ರಲ್ಲಿ ಇದೇ ಸೇವಾಗ್ರಾಮದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ರಾಜೀವ್ ಗಾಂಧಿಯವರು ನೆಟ್ಟಿದ್ದ ಸಸಿ ಬೃಹತ್ ಮರವಾಗಿದ್ದು, ಇದರ ಸಮೀಪವೇ ಇಂದು ರಾಹುಲ್ ಗಾಂಧಿಯವರು ಸಹ ಒಂದು ಸಸಿಯನ್ನು ನೆಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv