ಮೈಸೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಅವರು ವಿಜಯದಶಮಿ(Vijayadashami ) ಹಬ್ಬದ ಹಿನ್ನೆಲೆಯಲ್ಲಿ ಹೆಚ್ ಡಿ ಕೋಟಿ ತಾಲ್ಲೂಕಿನಲ್ಲಿರುವ ದೇವಸ್ಥಾನದಲ್ಲಿ(Temple) ಪೂಜೆ ಸಲ್ಲಿಸಿದ್ದಾರೆ.
ಕಬಿನಿ ಹಿನ್ನಿರಿನಲ್ಲಿರುವ ಭೀಮನಕೊಲ್ಲಿ ದೇವಸ್ಥಾನಕ್ಕೆ(Bheemanakolli Temple) ಭೇಟಿ ನೀಡಿದ ಸೋನಿಯಾ ಗಾಂಧಿ ಮಹದೇಶ್ವರನ ದರ್ಶನ ಪಡೆದರು. ಕಬಿನಿ(Kabini) ಹಿನ್ನಿರಿನಲ್ಲಿರುವ ಮಹದೇಶ್ವರ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇಲ್ಲಿ ದೇವರ ಮೂರ್ತಿಯನ್ನು ತಂದು ಪ್ರತಿಷ್ಠೆ ಮಾಡಿದ್ದಲ್ಲ, ಇದು ಉದ್ಭವ ಮೂರ್ತಿ ಎಂಬ ನಂಬಿಕೆಯಿದೆ.
Advertisement
Advertisement
ದೇವಸ್ಥಾನಕ್ಕೆ ಭೇಟಿ ನೀಡಿದ ಸೋನಿಯಾಗೆ ಅನುಷಾ ಎಂಬುವವರು ಮಹದೇಶ್ವರ ಸ್ವಾಮಿ ದೇವಸ್ಥಾನ ಹಿನ್ನೆಲೆಯ ಬಗ್ಗೆ ವಿವರಣೆ ನೀಡಿದ್ದಾರೆ. ಸೋನಿಯಾ ಗಾಂಧಿ ಭೇಟಿ ವೇಳೆ ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದರು.
Advertisement
ಸೋನಿಯಾ ಗಾಂಧಿ ಅವರು ತಮ್ಮ ಪುತ್ರ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo Yatra) ಪಾಲ್ಗೊಳ್ಳಲು ಸೋಮವಾರ ಆಗಮಿಸಿದ್ದಾರೆ. ಇದನ್ನೂ ಓದಿ: ಕ್ರೀಸ್ ಬಿಟ್ಟರೆ ಉಳಿಗಾಲವಿಲ್ಲ ಸ್ಟಬ್ಸ್‌ಗೆ ಚಹರ್ ವಾರ್ನಿಂಗ್ – ಕಣ್ಸನ್ನೆಯಲ್ಲೇ ಮಾತುಕತೆ
Advertisement
ಸೋನಿಯಾ ಗಾಂಧಿ ಅವರು ಕೊಡಗಿನ ರೆಸಾರ್ಟ್‌ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ವಾಸ್ತವ್ಯ ಹೂಡಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ನಲ್ಲಿ ಕೊಡಗಿಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ,ಎಚ್.ಡಿ. ಕೋಟೆ ತಾಲೂಕು ಕಬಿನಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೋನಿಯಾ ಗಾಂಧಿ ಅವರು ಶುಕ್ರವಾರ ಬೆಳಗ್ಗೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.