ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ (Congress Rally) ಮೋದಿ, ನಿಮ್ಮ ಸಮಾಧಿಯನ್ನು ಇಂದು ಅಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ ಎಂಬ ಘೋಷಣೆಗಳು ಕೇಳಿಬಂದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ (BJP) ನಾಯಕರು ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದರು.
ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಈ ವಿಷಯವನ್ನು ಪ್ರಸ್ತಾಪಿಸಿ ಸೋನಿಯಾ ಗಾಂಧಿ (Sonia Gandhi) ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗ ಕಾಣಿಸಿಕೊಂಡ ಎದೆನೋವು – ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವು
ಲೋಕಸಭೆಯಲ್ಲಿ ಮಾತನಾಡಿದ ಕಿರಣ್ ರಿಜಿಜು, ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ಮೋದಿಯವರಿಗೆ (Narendra Modi) ಸಮಾಧಿ ಅಗೆಯುವ ಬಗ್ಗೆ ಚರ್ಚೆ ನಡೆಸಿದೆ. ಈ ಮೂಲಕ ಕಾಂಗ್ರೆಸ್ ರಾಜಕೀಯ ಕೀಳು ಮಟ್ಟವನ್ನು ತಲುಪಿದೆ. ಈ ದೇಶಕ್ಕೆ ಇದಕ್ಕಿಂತ ನಾಚಿಕೆಗೇಡಿನ ಮತ್ತು ದುರಾದೃಷ್ಟಕರ ಘಟನೆ ಇನ್ನೊಂದಿಲ್ಲ. ಈ ಘಟನೆಗೆ ಪಕ್ಷದ ನಾಯಕತ್ವ ಕ್ಷಮೆಯಾಚಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ತಲ್ವಾರ್ ಹಿಡಿದು ಡ್ಯಾನ್ಸ್ – ರೀಲ್ಸ್, ಲೈಕ್ ಮಾಡಿದ ಇಬ್ಬರಿಗೂ ಬಿಸಿ ಮುಟ್ಟಿಸಿದ ಪೊಲೀಸರು
ಕಿರಣ್ ರಿಜಿಜು ಕ್ಷಮೆಯಾಚಿಸುವ ಬಗ್ಗೆ ಮಾತನಾಡಿದಾಗ, ಸದನದಲ್ಲಿ ಹಾಜರಿದ್ದ ಇತರ ಸಂಸದರು ಮತ್ತು ಸಚಿವರು ಸಹ ಅವರ ಬೆಂಬಲಕ್ಕೆ ನಿಂತರು. ಅರ್ಜುನ್ ರಾಮ್ ಮೇಘವಾಲ್, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಇತರ ಅನೇಕ ಬಿಜೆಪಿ ಸಂಸದರು ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಒಮ್ಮತದಿಂದ ಒತ್ತಾಯಿಸಿದರು. ಇದನ್ನೂ ಓದಿ: KSET: ಡಿ.22ರಿಂದ 24ರವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ದಾಖಲೆ ಪರಿಶೀಲನೆ-ಕೆಇಎ
ಇನ್ನು ರಾಜ್ಯಸಭೆಯಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, ಕಾಂಗ್ರೆಸ್ ರ‍್ಯಾಲಿಯಲ್ಲಿ ಹೇಳಿದ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಘೋಷಣೆಗಳು ಕಾಂಗ್ರೆಸ್ ಪಕ್ಷದ ಚಿಂತನೆ ಮತ್ತು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಪ್ರಧಾನಿಯ ವಿರುದ್ಧ ಇಂತಹ ಮಾತುಗಳನ್ನು ಹೇಳುವುದು ಮತ್ತು ಅವರ ಸಾವನ್ನು ಬಯಸುವುದು ಅತ್ಯಂತ ಖಂಡನೀಯ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ರಾಜಕೀಯದ ಮಟ್ಟವನ್ನು ಕೆಳಮಟ್ಟಕ್ಕೆ ಇಳಿಸಿದೆ. ಇದಕ್ಕೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಧಿವೇಶನವನ್ನು ಒಂದು ವಾರ ವಿಸ್ತರಿಸಿ – ಖಾದರ್‌ಗೆ ಅಶೋಕ್ ಪತ್ರ
ನಡ್ಡಾ ಹೇಳಿಕೆ ಬೆನ್ನಲೆ ಸದನದ ಎರಡೂ ಕಡೆಯಿಂದ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಗದ್ದಲ ಮುಂದುವರಿದ ಕಾರಣ ಉಪಸಭಾಪತಿ ಹರಿವಂಶ್ ಸದನವನ್ನು ಮುಂದೂಡಿದರು. ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡದ ಪ್ರಿಯಾಂಕ ಗಾಂಧಿ ಈ ರೀತಿಯ ಹೇಳಿಕೆಗಳನ್ನು ನಾವು ನೀಡಿಲ್ಲ, ನಾವು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದರು. ಇದನ್ನೂ ಓದಿ: MGNREGA ಬದಲು G RAM G – ಶೀಘ್ರವೇ ಮಂಡನೆಯಾಗಲಿದೆ ಉದ್ಯೋಗ ಖಾತರಿ ಮಸೂದೆ

