ನಾನೇ ಪೂರ್ಣಾವಧಿ ಅಧ್ಯಕ್ಷೆ – ಸೋನಿಯಾ ಗಾಂಧಿ

Public TV
1 Min Read
SONIA GANDHI 1

– ಭಿನ್ನಮತೀಯರಿಗೆ ತೀಕ್ಷ್ಣ ಸಂದೇಶ ರವಾನೆ

ನವದೆಹಲಿ: ನಾನು ಎಐಸಿಸಿ ಹಂಗಾಮಿ ಅಧ್ಯಕ್ಷೆಯಲ್ಲ, ಪೂರ್ಣಾವಧಿಯ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ನೇರವಾಗಿ ಚರ್ಚಿಸಿ ಎನ್ನುವ ಮೂಲಕ ಸೋನಿಯಾ ಗಾಂಧಿ ಕಾಂಗ್ರೆಸ್‍ನೊಳಗಿರುವ ಭಿನ್ನಮತೀಯರಿಗೆ ತೀಕ್ಷ್ಣ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.

ಇಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, G23 ಬಣ ಸೇರಿದಂತೆ ನೂತನ ಅಧ್ಯಕ್ಷರ ಬಗ್ಗೆ ಆಕ್ಷೇಪ ಎತ್ತುತ್ತಿದ್ದ ನಾಯಕರಿಗೆ ನೇರವಾಗೇ ಉತ್ತರ ನೀಡಿದ್ದಾರೆ.

Sonia Gandhi

G23 ನಾಯಕರು ಸೇರಿದಂತೆ ಕಾಂಗ್ರೆಸ್‍ನ ಹಲವು ನಾಯಕರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗಬೇಕು ಎಂದು ಮಾಧ್ಯಮಗಳಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಅಂಶವನ್ನ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಸೋನಿಯಾ ಗಾಂಧಿ, ಮಾಧ್ಯಮಗಳ ಮೂಲಕ ನಾಯಕತ್ವದ ಬಗ್ಗೆ ಚರ್ಚೆ ಮಾಡಬೇಡಿ ಏನೇ ಇದ್ದರೂ ನನ್ನಲ್ಲಿ ಚರ್ಚಿಸಿ ಎಂದು ಚಾಟೀ ಬೀಸಿದರು. ಇದನ್ನೂ ಓದಿ:   EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

sonia gandhi 1

ಇನ್ನು ಇದೇ ವೇಳೆ ಕಾಂಗ್ರೆಸ್ ಪಕ್ಷದ ಪುನಶ್ಚೇತನ ಆಗಬೇಕು ಎಂದು ಸೋನಿಯಗಾಂಧಿ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನಿಂದ ಸಂಘಟನೆ ಆಗಬೇಕಿದ್ದು, ಪಕ್ಷದ ಹಿತಾಸಕ್ತಿ ನಮ್ಮ ಪರಮೋಚ್ಚ ಧ್ಯೇಯವಾಗಬೇಕಿದೆ ಎಂದು ಹಿರಿಯ ನಾಯಕರಿಗೆ ಹೇಳಿದರು. ಪಕ್ಷದ ಸಾಂಸ್ಥಿಕ ಚುನಾವಣೆ ಬಹಳ ಬೇಗ ಆಗಬೇಕಿದ್ದು, ಈ ಬಗ್ಗೆ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ವಿವರಿಸಲಿದ್ದಾರೆ ಪ್ರಸ್ತಾವಿಕ ಭಾಷಣದಲ್ಲಿ ಸೋನಿಯಾ ಗಾಂಧಿ ಹೇಳಿದರು. ಇದನ್ನೂ ಓದಿ:   EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

Share This Article
Leave a Comment

Leave a Reply

Your email address will not be published. Required fields are marked *