Latest
ಸೋನಿಯಾ ಗಾಂಧಿ ಹುಟ್ಟುಹಬ್ಬ- ಈರುಳ್ಳಿ ಉಡುಗೊರೆ ನೀಡಿದ ಪುದುಚೇರಿ ಸಿಎಂ

ಪುದುಚೇರಿ: ಈರುಳ್ಳಿ ಬೆಲೆ ಹೆಚ್ಚಳದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬವನ್ನು ಕಾರ್ಯಕರ್ತರು ಆಚರಿಸಿದ್ದಾರೆ. ಆದರೆ ನಾರಾಯಣಸ್ವಾಮಿಯವರು ಸೋನಿಯಾ ಅವರ ಹುಟ್ಟುಹಬ್ಬದ ಅಂಗವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮಹಿಳೆಯರಿಗೆ ಈರುಳ್ಳಿ ಹಂಚಿದ್ದಾರೆ.
ಪುದುಚೇರಿಯ ಕಾಂಗ್ರೆಸ್ ಕೇಂದ್ರ ಕಚೇರಿ ಬಳಿ ಸೋನಿಯಾ ಗಾಂಧಿಯವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಪಕ್ಷದ ಮುಖ್ಯಸ್ಥ ನಮಶಿವಾಯಂ ಅವರು ನಾರಾಯಣಸ್ವಾಮಿಯವರೊಂದಿಗೆ ಮಹಿಳೆಯರಿಗೆ ಈರುಳ್ಳಿ ಹಂಚಿದ್ದಾರೆ. ಈರುಳ್ಳಿ ಬೆಲೆ ಹೆಚ್ಚಾದ ಹಿನ್ನೆಲೆ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಅಂಗವಾಗಿ ಮಹಿಳಾ ಕಾರ್ಯಕರ್ತರಿಗೆ ಸಿಎಂ ಈರುಳ್ಳಿ ಉಡುಗೊರೆ ನೀಡಿ, ಪ್ರತಿಭಟಿಸಿದ್ದಾರೆ.
ಈರುಳ್ಳಿ ಬೆಲೆ ಹೆಚ್ಚಳವಾಗಿರುವ ಕುರಿತು ನಿನ್ನೆಯಷ್ಟೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದು, ಈರುಳ್ಳಿ ಬೆಲೆ ಗಗನಕ್ಕೆ ತಲುಪುತ್ತಿದ್ದರೂ ಕೇಂದ್ರ ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿದೆ. ಈರುಳ್ಳಿ ಪ್ರತಿ ಕೆ.ಜಿ.ಗೆ 200 ರೂ., ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 75 ರೂ.ಗೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆರಸಿದ್ದರು.
ಶನಿವಾರ ಗೋವಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೋಟಗಾರಿಕಾ ಮಂಡಳಿ ಬಳಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಈರುಳ್ಳಿ ಬೆಲೆ ಕಡಿಮೆ ಮಾಡಬೇಕು ಇಲ್ಲವೇ ಸರ್ಕಾರ ಸಬ್ಸೀಡಿ ಘೋಷಿಸಬೇಕು. ಆಹಾರ ತಯಾರಿಸಲು ಈರುಳ್ಳಿ ಅಗತ್ಯವಾಗಿದ್ದು, ಬೆಲೆ ಹೆಚ್ಚಾಗಿದ್ದರಿಂದ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದರು.
ಈರುಳ್ಳಿ ಬಳಸದೇ ಅವಲಕ್ಕಿ (ಪೋಹಾ) ಮಾಡುವ ವಿಧಾನ
ಈರುಳ್ಳಿ ಬಳಸದೇ ಅವಲಕ್ಕಿ (ಪೋಹಾ) ಮಾಡುವ ವಿಧಾನಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಸೆಂಚೂರಿ ಬಾರಿಸಿ ಮುನ್ನುಗುತ್ತಿದೆ. ಏನೇ ಅಡುಗೆ ಮಾಡಿದ್ರೆ ಈರುಳ್ಳಿ ಬೇಕೇ ಬೇಕು. ನಿಮಗಾಗಿ ಈರುಳ್ಳಿ ಬಳಸದೇ ರುಚಿ ರುಚಿಯಾಗಿ ಪೋಹಾ ಮಾಡುವ ವಿಧಾನ ಇಲ್ಲಿದೆ.#AvalakkiRecipe #Poha #Onion #KannadaRecipe #Food
Posted by Public TV on Sunday, December 8, 2019
