ನವದೆಹಲಿ: ಹುಟ್ಟುಹಬ್ಬದ ಖುಷಿಯಲ್ಲಿದ್ದ ಎಐಸಿಸಿ ಅಧಿನಾಯಕಿ ಸೋನಿಯಗಾಂಧಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸೋಲಿನ ಗಿಫ್ಟ್ ನೀಡಿದ್ದಾರೆ.
ಉಪ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ ಕೇವಲ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಲ್ಪ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಗೂ ಮುನ್ನ ಉಪಚುನಾವಣೆಗೆ ಸಿದ್ಧವಾಗಿದ್ದ ಕಾಂಗ್ರೆಸ್ ಸಾಕಷ್ಟು ತಂತ್ರಗಳನ್ನು ಮಾಡಿತ್ತು. ಅಲ್ಲದೇ ಹೋದ ಕಡೆಯಲ್ಲ ಅನರ್ಹ ಶಾಸಕರಿಗೆ ಪಾಠ ಕಲಿಸಬೇಕು ಅವರನ್ನು ಸೋಲಿಸುವುದು ನಮ್ಮ ಆದ್ಯತೆ ಎನ್ನುವಂತೆ ಸಿದ್ದರಾಮಯ್ಯ ಭಾಷಣ ಮಾಡಿದ್ದರು.
ಚುನಾವಣಾ ನೇತೃತ್ವದ ಹೊತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದ್ದರು. ತಮ್ಮ ಬೆಂಬಲಿಗರು ಕಟ್ಟಾ ಶಿಷ್ಯರಿಗೆ ಟಿಕೆಟ್ ಕೊಡಿಸುವ ಮೂಲಕ ಕನಿಷ್ಠ 5-6 ಸೀಟುಗಳನ್ನು ಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಸಿದ್ದರಾಮಯ್ಯ ತಂತ್ರಗಾರಿಕೆ ಸಂಪೂರ್ಣ ಉಲ್ಟಾ ಆಗಿದ್ದು ಉಪಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸೋನಿಯಗಾಂಧಿ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ನಾಯಕರು ಸೋಲಿನ ಗಿಫ್ಟ್ ಕೊಟ್ಟಂತಾಗಿದೆ.
ದೇಶದಲ್ಲಿ ಆಗುತ್ತಿರುವ ಮಹಿಳೆಯರ ಮೇಲಿನ ಸರಣಿ ದೌರ್ಜನ್ಯಗಳ ಹಿನ್ನೆಲೆ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸೋನಿಯಗಾಂಧಿ ನಿರಾಕರಿಸಿದ್ದಾರೆ.