– ರಾಜ್ಯದಿಂದ ಆಯ್ಕೆಯಾದ ಅಜಯ್ ಮಾಕೇನ್, ಸೈಯದ್ ನಾಸೀರ್ ಹುಸೇನ್ ಕೂಡಾ ಪ್ರಮಾಣ ಸ್ವೀಕಾರ
ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದ್ದು ಗುರುವಾರ (ಏ.4) ರಾಜ್ಯಸಭೆ ಸದಸ್ಯೆಯಾಗಿ (Rajya Sabha Member) ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಯ್‌ಬರೇಲಿಯಿಂದ ಸಂಸದೆಯಾಗಿ ಆಯ್ಕೆಯಾಗುತ್ತಿದ್ದ ಅವರು ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ರಾಜಸ್ಥಾನದಿಂದ ಅವರು ಆಯ್ಕೆಯಾಗಿದ್ದಾರೆ.
ಗುರವಾರ ಸಂಸತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಜಗದೀಪ್ ಧನಕರ್ (Jagdeep Dhankhar) ಪ್ರಮಾಣ ವಚನ ಭೋದಿಸಿದರು. ಸೋನಿಯಾ ಗಾಂಧಿ ಜೊತೆಗೆ ಆರ್‌ಪಿಎನ್ ಸಿಂಗ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಕರ್ನಾಟಕದ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್, ಸೈಯದ್ ನಾಸೀರ್ ಹುಸೇನ್, ಪಶ್ಚಿಮ ಬಂಗಾಳದ ಬಿಜೆಪಿ ಸದಸ್ಯ ಸಾಮಿಕ್ ಭಟ್ಟಾಚಾರ್ಯ, ವೈಎಸ್‌ಆರ್‌ಸಿಪಿ ನಾಯಕರಾದ ಗೋಲಾ ಬಾಬು ರಾವ್, ಮೇಧಾ ರಘುನಾಥ್ ರೆಡ್ಡಿ ಮತ್ತು ಯೆರುಂ ವೆಂಕಟ್ ಸುಬ್ಬಾ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು.
Advertisement
Advertisement
ಸೋನಿಯಾ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಶುಭ ಹಾರೈಸಿದ್ದಾರೆ. ಲೋಕಸಭೆಯಲ್ಲಿ 25 ವರ್ಷಗಳನ್ನು ಪೂರೈಸಿರುವ ಅವರು ಮತ್ತು ಈಗ ನನ್ನ ಸಹ ಸದಸ್ಯರಾಗಿದ್ದಾರೆ. ನಾವು ಮೇಲ್ಮನೆಯಲ್ಲಿ ಅವರ ಉಪಸ್ಥಿತಿಗಾಗಿ ಕಾಯುತ್ತಿದ್ದೇವೆ. ಮುಂದೆ ಅವರ ಅವಧಿ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಅಳಿಯ ರಾಬರ್ಟ್ ವಾದ್ರಾ ಶುಭ ಹಾರೈಸಿದರು.
Advertisement
Advertisement
1999 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸೋನಿಯಾ ಗಾಂಧಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ತಮ್ಮ ಪತಿ ರಾಜೀವ್ ಗಾಂಧಿ ಸತತ 4 ಚುನಾವಣೆಗಳಲ್ಲಿ ಪ್ರತಿನಿಧಿಸುತ್ತಿದ್ದ ಅಮೇಥಿಯನ್ನು ಉಳಿಸಿಕೊಳ್ಳಲು ಅವರು ಬಳ್ಳಾರಿಯನ್ನು ತ್ಯಜಿಸಿದರು. 2004ರ ಚುನಾವಣೆಯಲ್ಲಿ, ಅವರು ಗಾಂಧಿ ಕುಟುಂಬದ ಪ್ರಭಾವ ಹೊಂದಿರುವ ರಾಯ್ ಬರೇಲಿಗೆ ಸ್ಥಳಾಂತರಗೊಂಡರು, ತಮ್ಮ ಮಗ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರವನ್ನು ಬಿಟ್ಟುಕೊಟ್ಟರು.
ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಕಾಂಗ್ರೆಸ್ 17 ಬಾರಿ ರಾಯ್ ಬರೇಲಿ ಕ್ಷೇತ್ರದಲ್ಲಿ ಗೆದ್ದಿದೆ. ಈ ಸ್ಥಾನವನ್ನು ಮೊದಲು ಫಿರೋಜ್ ಗಾಂಧಿ ಮತ್ತು ನಂತರ ಮೂರು ಬಾರಿ ಇಂದಿರಾ ಗಾಂಧಿ ಪ್ರತಿನಿಧಿಸಿದರು. 1977 ರಲ್ಲಿ ಜನತಾ ಪಕ್ಷದ ನಾಯಕ ರಾಜ್ ನಾರಾಯಣ್ ಇಲ್ಲಿ ಇಂದಿರಾ ಗಾಂಧಿಯನ್ನು ಸೋಲಿಸಿದರು. 1996 ಮತ್ತು 1998ರ ಚುನಾವಣೆಗಳಲ್ಲಿ ಬಿಜೆಪಿ ಈ ಸ್ಥಾನವನ್ನು ಗೆದ್ದಿತು.