ನವದೆಹಲಿ: ಕಾಂಗ್ರೆಸ್ಸಿನ ಇಬ್ಬರು ಪ್ರಭಾವಿ ನಾಯಕರಾದ ಪಿ. ಚಿದಂಬರಂ ಹಾಗೂ ಡಿಕೆ ಶಿವಕುಮಾರ್ ಅವರು ತಿಹಾರ್ ಜೈಲು ಸೇರಿದ್ದು, ಇದೀಗ ಇವರನ್ನು ಕೈ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮಾಡಿದ್ದಾರೆ.
ಇಂದು ಬೆಳಗ್ಗೆ ತಿಹಾರ್ ಜೈಲಿಗೆ ಭೇಟಿ ನೀಡಿರುವ ಸೋನಿಯಾ ಅವರು ಡಿಕೆಶಿ ಜೊತೆ ಮಾತುಕತೆ ನಡೆಸಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಅಲ್ಲದೆ ಪಕ್ಷ ನಿಮ್ಮ ಜೊತೆಗಿದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ತಿಹಾರ್ ಜೈಲಿನ ಜೈಲ್ ನಂ.7 ರಲ್ಲಿ ಚಿದಂಬರಂ ಹಾಗೂ ಡಿಕೆಶಿ ಇದ್ದಾರೆ. ಹೀಗಾಗಿ ಅಲ್ಲಿಯೇ ಇಬ್ಬರನ್ನೂ ಸೋನಿಯಾ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಕೂಡ ಸಂಕಷ್ಟದಲ್ಲಿರುವ ನಾಯಕ ಬೆನ್ನಿಗೆ ನಿಲ್ಲುತ್ತದೆ. ಅವರಿಗೆ ಧೈರ್ಯವನ್ನು ಕೊಡುತ್ತದೆ. ಅಲ್ಲದೆ ಮುಂದಿನ ಹೋರಾಟಕ್ಕೆಲ್ಲ ಪಕ್ಷ ನಿಮ್ಮ ಜೊತೆಗಿರುತ್ತದೆ ಎಂಬ ಮೆಸೇಜ್ ಪಾಸ್ ಮಾಡುವ ಪ್ರಯತ್ನ ಮಾಡಿದ್ದಾರೆ.
Advertisement
ಡಿಕೆಶಿ ಅವರ ಆಸ್ಪತ್ರೆಯಲ್ಲಿರುವಾಗ ರಾಜ್ಯದ ಕೆಲ ನಾಯಕರು ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದರು. ಆದರೆ ಡಿಕೆಶಿ ಜೈಲು ಸೇರಿದ ಬಳಿಕ ಯಾವೊಬ್ಬ ನಾಯಕ ಕೂಡ ಇದೂವರೆಗಹೂ ಭೇಟಿ ಮಾಡಿಲ್ಲ. ಇನ್ನೊಂದು ವಿಚಾರವೆಂದರೆ, ತಿಹಾರ್ ಜೈಲಿಗೆ ಎಲ್ಲರಿಗೂ ಪ್ರವೇಶವಿಲ್ಲ. ಕೇವಲ ಪ್ರಮುಖ ಗಣ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಡಿಕೆಶಿ ಅಥವಾ ಚಿದಂಬರಂ ಭೇಟಿಗೆ ಅವಕಾಶವಿದೆ.