ನವದೆಹಲಿ: ಎಐಸಿಸಿ (AICC) ಮಾಜಿ ಅಧ್ಯಕ್ಷರಾದ ಸೊನಿಯಾ ಗಾಂಧಿ (Sonia Gandhi) ಅವರನ್ನು ಬುಧವಾರ ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ (Delhi) ಗಂಗಾರಾಮ್ ಆಸ್ಪತ್ರೆಗೆ (Ganga Ram Hospital) ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪುತ್ರಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರೊಂದಿಗೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ಬಂದಿದ್ದಾರೆ. ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಇದನ್ನೂ ಓದಿ: ಕಟೀಲ್‌ಗೆ ಛೀ, ಥೂ ಎಂದ ವಿಶ್ವನಾಥ್
Advertisement
Advertisement
ಸೋನಿಯಾ ಗಾಂಧಿ ಅವರು ಮಂಗಳವಾರದಿಂದ (ಜ.3) ಅಸ್ವಸ್ಥರಾಗಿದ್ದರು. ಅದಕ್ಕಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜನವರಿ 3ರ ಸಂಜೆ ಉತ್ತರ ಪ್ರದೇಶಕ್ಕೆ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) 7 ಕಿಮೀ ನಡೆದು ದೆಹಲಿಗೆ ಮರಳಿದ್ದಾರೆ. ಇದನ್ನೂ ಓದಿ: KPTCL ನೇಮಕಾತಿ ಪರೀಕ್ಷೆ ಅಕ್ರಮ – ಮೂವರು ಯುವತಿಯರು ಸೇರಿ ನಾಲ್ವರು ಅರೆಸ್ಟ್
Advertisement
Advertisement
ಮಂಗಳವಾರ ಉತ್ತರ ಪ್ರದೇಶದ (UttarPradesh) ಬಾಗ್‌ಪತ್ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಭಾರತ್ ಜೋಡೋ ಯಾತ್ರೆ ಇಂದು ಬೆಳಿಗ್ಗೆ 6 ಗಂಟೆಗೆ ಪುನಾರಂಭಗೊಂಡಿದೆ. ಆದ್ರೆ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಡವಾಗಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.