ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಲಹರಿ ಸಂಸ್ಥೆಯ ಲಹರಿ ವೇಲು ಈಗಾಗಲೇ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಗಾಯನದ ಜೊತೆಗೆ ಗೀತರಚನೆ ಕೂಡ ಮಾಡಿದ್ದಾರೆ. ಇವರದ್ದೇ ಗೀತರಚನೆ ಮತ್ತು ಗಾಯನದಲ್ಲಿ ಮೂಡಿ ಬಂದಿರುವ ‘ಹುಟ್ಗುಣ ಸುಟ್ರು ಹೋಗಲ್ಲ’ ಗೀತೆಯು ಜೂನ್ 11 ರಂದು ಲಹರಿ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಲಿದೆ. ಅಂದು ಅವರ ಹುಟ್ಟುಹಬ್ಬವೂ ಆಗಿರುವುದರಿಂದ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಅವರು ವೇಲು ಅವರ ಹುಟ್ಟುಹಬ್ಬಕ್ಕೆ ಇದನ್ನು ಗಿಫ್ಟ್ ಆಗಿ ನೀಡಿದ್ದಾರೆ.
Advertisement
ಇದು ಲಹರಿ ವೇಲು ಅವರು ಹಾಡಿರುವ ಎರಡನೇ ಗೀತೆಯಾಗಿದ್ದು, ಇವರು ಗಾಯಕರಾಗಿದ್ದು ವಿಶೇಷ ಸಂದರ್ಭದಲ್ಲಂತೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಲಹರಿ ಸಂಸ್ಥೆಯು ಅನೇಕರಿಗೆ ಸಹಕಾರ ನೀಡಿದೆ. ಆ ವೇಳೆಯಲ್ಲಿ ಸುಮ್ಮನೆ ತಮ್ಮ ಪಾಡಿಗೆ ತಾವು ವೇಲು ಹಾಡೊಂದನ್ನು ಗುನುಗುತ್ತಿದ್ದರಂತೆ. ಅದನ್ನು ಕೇಳಿಸಿಕೊಂಡ ಅಭಿಮಾನ್ ರಾಯ್ ನೀವ್ಯಾಕೆ ಹಾಡೋಕೆ ಟ್ರೈ ಮಾಡಬಾರದು ಅಂದರಂತೆ. ಮುಜುಗರದಿಂದಲೇ ವೇಲು ಒಪ್ಪಿಕೊಂಡು ಆನಂತರ ‘ಇರುವುದೊಂದೆ ಜನ್ಮ ನೀ ಸಹಾಯ ಮಾಡು ತಮ್ಮ’ ಗೀತೆಯನ್ನು ಹಾಡಿದ್ದಾರೆ. ಆ ಗೀತೆ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?
Advertisement
Advertisement
ಹೀಗೆ ಶುರುವಾದ ಗಾಯನ ಪಯಣ ಮುಂದುವರಿದದ್ದು ಮತ್ತದೆ ಅಭಿಮಾನ್ ರಾಯ್ ಸಂಗೀತ ಸಂಯೋಜನೆಯ ಮೂಲಕ. ಅದ್ಭುತ ಮಾತುಗಾರ ಆಗಿರುವ ಲಹರಿ ವೇಲು ಅವರು, ಅಷ್ಟೇ ಚೆನ್ನಾಗಿ ಜನರಿಗೆ ಮಾರ್ಗದರ್ಶನ ಮಾಡಬಲ್ಲರು. ಒಳ್ಳೊಳ್ಳೆ ಉದಾಹರಣಗಳನ್ನು ಕೊಟ್ಟು ತಿದ್ದಬಲ್ಲರು. ಈ ಗುಣವೇ ಅವರನ್ನು ಸಾಹಿತಿಯನ್ನಾಗಿ ಮಾಡಿದೆ. ಒಂದಷ್ಟು ಸಾಲುಗಳನ್ನು ಬರೆದು, ಅಭಿಮಾನ್ ರಾಯ್‌ಗೆ ಕಳುಹಿಸಿದ್ದಾರೆ. ಆ ಸಾಲುಗಳು ಹಾಡಾಗಿ ಜೂ.11 ರಂದು ಕೇಳುಗರ ಕಿವಿಗೂ ತಲುಪಲಿವೆ.
Advertisement
ಈ ಕುರಿತು ʻಪಬ್ಲಿಕ್ ಟಿವಿʼ ಡಿಜಿಟಲ್ ಜೊತೆ ಮಾತನಾಡಿದ ಲಹರಿ ವೇಲು ಅವರು, “ಈಗಾಗಲೇ ಅಭಿಮಾನ್ ರಾಯ್ ಅವರ ಸಂಗೀತ ಸಂಯೋಜನೆಯಲ್ಲಿ ಒಂದು ಗೀತೆಯನ್ನು ಹಾಡಿರುವೆ. ಇದು ಎರಡನೇ ಗೀತೆ. ಸ್ಫೂರ್ತಿ ತುಂಬಬಲ್ಲಂತಹ ಸಾಲುಗಳನ್ನು ಬರೆದು ರಾಯ್ ಅವರಿಗೆ ತೋರಿಸಿದೆ. ಸಾಲುಗಳು ಚೆನ್ನಾಗಿವೆ ಅವುಗಳನ್ನು ಹಾಡಾಗಿಸಿ ಅಂದರು. ಹೀಗೆ ಈ ಹಾಡು ಶುರುವಾಗಿ, ಇದೀಗ ರೆಕಾರ್ಡಿಂಗ್ ಕೂಡ ಆಗಿದೆ. ನಾನು ಕಂಡುಂಡ ಅನುಭವಗಳನ್ನೇ ಹಾಡಾಗಿಸಿದ್ದೇನೆ’ ಎನ್ನುತ್ತಾರೆ ವೇಲು ಅವರು.