CinemaDistrictsKarnatakaLatestMain PostSandalwood

ಡಾ.ರಾಜ್ ಸಿನಿಮಾದ ಸಾಂಗ್ ಶಿವಣ್ಣನ ಸಿನಿಮಾಗೆ ಟೈಟಲ್

ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರಭುದೇವ್ ಒಟ್ಟಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯನ್ನು ನಿನ್ನೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ನಲ್ಲಿ ಓದಿದ್ದೀರಿ. ಈ ಸುದ್ದಿಯ ಮುಂದುವರೆದ ಅಪ್ ಡೇಟ್ ಅಂದರೆ, ಈ ಚಿತ್ರಕ್ಕೆ ವಿಭಿನ್ನವಾಗಿರುವ ಟೈಟಲ್ ಇಡಲಾಗಿದೆ. ಅದೂ ಡಾ.ರಾಜ್ ಕುಮಾರ್ ನಟನೆಯ ಸಿನಿಮಾದ ಸಾಲು ಎನ್ನುವುದು ವಿಶೇಷ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

ಣ್ಣಾವ್ರ ನಟನೆಯ ‘ಸತ್ಯ ಹರಿಶ್ಚಂದ್ರ’ ಸಿನಿಮಾ ಇನ್ನೂ ನೂರು ವರ್ಷಕ್ಕೂ ಅದು ಎವರ್ ಗ್ರೀನ್ ಸಿನಿಮಾಗಳ ಸಾಲಿನಲ್ಲಿ ಇರಲಿದೆ. ಈ ಚಿತ್ರದ ಕುಲದಲ್ಲಿ ಕೀಳಾವುದೋ ಹುಚ್ಚಪ್ಪ ಹಾಡು ಫೇಮಸ್. ಈ ಹೊತ್ತಿಗೂ ಆರ್ಕೆಸ್ಟ್ರಾಗಳಲ್ಲಿ ಈ ಹಾಡು ಹೇಳಿಯೇ ಮುಕ್ತಾಯ ಮಾಡುತ್ತಾರೆ. ಈ ಹಾಡಿನ ಒಂದು ಸಾಲನ್ನು ಚಿತ್ರದ ಟೈಟಲ್ ಆಗಿ ಬಳಕೆಯಾಗುತ್ತಿದ್ದೆ. ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರಕ್ಕೆ ‘ಕುಲದಲ್ಲಿ ಕೀಳಾವುದೋ’ ಎಂದು ಟೈಟಲ್ ಇಡಲಾಗಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

ಈ ಸಿನಿಮಾದ ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆಷ್ಟೇ ಪ್ರಭುದೇವ್ ನಟನೆಯ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರ ಮಾಡಿದ್ದರು. ಇದೀಗ ಪುನೀತ್ ಅವರ ಸಹೋದರ ಶಿವರಾಜ್ ಕುಮಾರ್ ಜತೆ ಪ್ರಭದೇವ ನಟಿಸಲಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅದ್ಧೂರಿಯ ತಾರಾಗಣವೇ ಸಿನಿಮಾದಲ್ಲಿ ಇರಲಿದೆಯಂತೆ. ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಭಾರೀ ಬಜೆಟ್ ನಲ್ಲಿಯೇ ತಯಾರು ಆಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಬಿಡುಗಡೆಗೆ ರೆಡಿಯಾಗಿದೆ. ಗರಡಿ ಅರ್ಧಕರ್ಧ ಶೂಟಿಂಗ್ ಮುಗಿಸಿದೆ. ಈ ಎರಡೂ ಚಿತ್ರಗಳು ತೆರೆಗೆ ಬಂದ ಮೇಲೆ ಹೊಸ ಸಿನಿಮಾದ ಕೆಲಸ ಶುರುವಾಗಲಿದೆಯಂತೆ. ಈಗಾಗಲೇ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಯೋಗರಾಜ್ ಭಟ್ ಅವರು ಕಥೆ ಬರೆದಿದ್ದು. ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ಮಾಡಲಿದ್ದಾರಂತೆ ಭಟ್.

Leave a Reply

Your email address will not be published.

Back to top button