Bollywood

ಸೋನಂ ಕಪೂರ್ ಐಷಾರಾಮಿ ಮನೆ ಹೇಗಿದೆ ಗೊತ್ತಾ?

Published

on

Share this

ಮುಂಬೈ: ಬಾಲಿವುಡ್ ನಟಿ ಸೋನಮ್ ಕಪೂರ್ ತಮ್ಮ ಐಷಾರಾಮಿ ಮನೆಯನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ.

ಸೆಲೆಬ್ರಿಟಿಗಳು ತಮ್ಮ ಮನೆ ಡಿಸೈನ್‍ಗೆ ಹೆಚ್ಚು ಒತ್ತು ನೀಡುತ್ತಾರೆ. ದೊಡ್ಡ ಮನೆ ಖರೀದಿಸಿ ಅದಕ್ಕೆ ಐಷಾರಾಮಿ ಲುಕ್ ನೀಡುತ್ತಾರೆ. ಆದರೆ ಅಭಿಮಾನಿಗಳಿಗೆ ಮನೆ ತೋರಿಸೋಕೆ ಯಾರೂ ಅಷ್ಟಾಗಿ ಇಷ್ಟಪಡುವುದಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಮನೆಯ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದು ಇದೆ. ಅದನ್ನು ಹೊರತುಪಡಿಸಿ ಮತ್ಯಾರೂ ಈ ರೀತಿ ಮನೆಯ ಪರಿಚಯ ಮಾಡಿಲ್ಲ. ಆದರೆ ಸೋನಮ್ ಕಪೂರ್ ಅಭಿಮಾನಿಗಳಿಗೆ ತಮ್ಮ ಮನೆ ತೋರಿಸಿದ್ದಾರೆ.

ಸೋನಮ್ ಹಾಗೂ ಅವರ ಪತಿ ಆನಂದ್ ಲಂಡನ್‍ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಯನ್ನು ಅಭಿಮಾನಿಗಳಿಗೆ ಅವರು ಪರಿಚಯಿಸಿದ್ದಾರೆ. ಈ ಮನೆ ತುಂಬಾನೇ ಐಷಾರಾಮಿ ಆಗಿದೆ. ಲಿವಿಂಗ್ ಏರಿಯಾ, ಕಿಚನ್, ಪೌಡರ್ ರೂಮ್, ವಾಶ್‍ರೂಮ್ ಎಲ್ಲವನ್ನೂ ಸೋನಮ್ ವೀಡಿಯೋದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಅವರು ಹೈಲೈಟ್ ಆಗಿದ್ದು ಟಾಯ್ಲೆಟ್ ವಿಚಾರದಲ್ಲಿ. ಇದನ್ನೂ ಓದಿ:  ಅಭಿಮಾನಿಗಳಿಗೆ ಟಿಪ್ಸ್ ನೀಡಿದ ಶಿಲ್ಪಾ ಶೆಟ್ಟಿ

 

View this post on Instagram

 

A post shared by Sonam K Ahuja (@sonamkapoor)

ನನ್ನ ಬಾತ್‍ರೂಮ್‍ನಲ್ಲಿ ಸ್ಪೆಷಲ್ ಏನು ಗೊತ್ತಾ? ಈ ಟಾಯ್ಲೆಟ್ ಮೇಲೆ ನನಗೆ ಗೀಳು ಹತ್ತಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಇದನ್ನು ನೋಡಿದ ಅನೇಕರು ಸೋನಮ್ ಅವರನ್ನು ಟೀಕೆ ಮಾಡಿದ್ದಾರೆ. ಟಾಯ್ಲೆಟ್‍ನಲ್ಲಿ ಗೀಳು ಹತ್ತುವ ವಿಚಾರ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಅವರ ಸಂಪೂರ್ಣ ಮನೆಯನ್ನು ಇಷ್ಟಪಟ್ಟಿದ್ದಾರೆ. ಮನೆಯಲ್ಲಿ ಕೆಲಸ ಮಾಡೋಕೂ ಜಾಗವಿದೆ. ಸೋನಮ್ ಹಾಗೂ ಆನಂದ್ ಒಂದೇ ಕಡೆ ಕೂತು ಕೆಲಸ ಮಾಡುತ್ತಾರೆ. ಈ ಬಗ್ಗೆಯೂ ಸೋನಮ್ ಹೇಳಿಕೊಂಡಿದ್ದಾರೆ.

ಸೋನಮ್ ಹಾಗೂ ಆನಂದ್ 2018ರ ಮೇ ತಿಂಗಳಲ್ಲಿ ಮದುವೆ ಆಗಿದ್ದರು. ಮದುವೆ ಆದ ನಂತರದಲ್ಲಿ ಅವರ ನಟನೆಯ ಮೂರು ಸಿನಿಮಾಗಳು ಮಾತ್ರ ತೆರೆಗೆ ಬಂದಿವೆ. ಬ್ಲೈಂಡ್ ಸಿನಿಮಾದಲ್ಲಿ ಸೋನಮ್ ನಟಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement