ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ಮೊದಲ ಮಗುವಿನ ಆಗಮನವಾಗುವ ಖುಷಿಯಲ್ಲಿದ್ದಾರೆ. ಇದೀಗ ಇದೇ ಜುಲೈ 17ಕ್ಕೆ ತಂದೆ ಅನಿಲ್ ಕಪೂರ್ ದಂಪತಿಯ ಸಾರಥ್ಯದಲ್ಲಿ ಸೋನಮ್ ಬೇಬಿ ಶವರ್ ಈವೆಂಟ್ ಮುಂಬೈನಲ್ಲಿ ನಡೆಯಲಿದೆ. ಬಾಲಿವುಡ್‌ನ ಬಿಗ್ ಸ್ಟಾರ್ಸ್ ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ. ಯಾರೆಲ್ಲಾ ಅತಿಥಿಗಳು ಕಾರ್ಯಕ್ರಮಕ್ಕೆ ಭಾಗಿಯಾಗುತ್ತಾರೆ ಎಂಬ ಡಿಟೈಲ್ಸ್ ಇಲ್ಲಿದೆ.
ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಸೋನಮ್ ಕಪೂರ್, ಮೇ ೮ರಂದು 2018ರಲ್ಲಿ ಆನಂದ್ ಅಹುಜಾ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ತಾಯ್ತನದ ಖುಷಿಯಲ್ಲಿರುವ ಸೋನಮ್‌ಗೆ ಬೇಬಿ ಶವರ್ ಕಾರ್ಯಕ್ರಮ ಮಾಡಲು ತಂದೆ ಅನಿಲ್ ಕಪೂರ್ ದಂಪತಿ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಅದ್ದೂರಿಯಾಗಿ ಈವೆಂಟ್ ಮಾಡಲು ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಈವೆಂಟ್‌ಗೆ ಚಿಯಾನ್ ವಿಕ್ರಮ್ ಎಂಟ್ರಿ: ಆರೋಗ್ಯದ ಕುರಿತು ನಟ ಸ್ಪಷ್ಟನೆ
ಇದೇ ಜುಲೈ 17ಕ್ಕೆ ಸೋನಮ್ ಕಪೂರ್ ಬೇಬಿ ಶವರ್ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಯಾರೆಲ್ಲಾ ಸೋನಮ್ ಅವರ ಬೇಬಿ ಶವರ್‌ಗೆ ಭಾಗಿಯಾಗುತ್ತಾರೆ ಅನ್ನೋ ಮಾಹಿತಿ ರಿವೀಲ್ ಆಗಿದೆ. ಜಾನ್ವಿ ಕಪೂರ್,ಖುಷಿ ಕಪೂರ್, ಅರ್ಜುನ್ ಕಪೂರ್, ಕರೀಷ್ಮಾ, ಕರೀನಾ ಕಪೂರ್, ಸ್ವರಾ ಭಾಸ್ಕರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಮಲೈಕಾ ಅರೋರಾ ಈ ಎಲ್ಲಾ ಬಿಟೌನ್ ಸ್ಟಾರ್ಸ್ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿದ್ದಾರೆ.
2018ರಲ್ಲಿ ಸೋನಮ್ ಅವರ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಈಗ ಬೇಬಿ ಶವರ್ ಕಾರ್ಯಕ್ರಮವನ್ನ ಇನ್ನು ಗ್ರ್ಯಾಂಡ್ ಆಗಿ ಆಯೋಜಿಸಲು ಭರ್ಜರಿ ತಯಾರಿ ನಡೆಯುತ್ತಿದೆ. ವಿದೇಶದಲ್ಲಿ ಪತಿ ಜತೆ ನೆಲೆಸಿರುವ ಸೋನಮ್‌ಗೆ, ಇತ್ತೀಚೆಗಷ್ಟೇ ಪತಿ ಆನಂದ್ ಅಹುಜಾ ಕುಟುಂಬದವರು ಬೇಬಿ ಶವರ್ ಕಾರ್ಯಕ್ರಮ ಮಾಡಲಾಗಿತ್ತು.