BollywoodCinemaLatestMain Post

ಸಹಜ ಡೆಲಿವರಿ ಸೀಕ್ರೆಟ್ ಬಿಚ್ಚಿಟ್ಟ ಸೋನಂ ಕಪೂರ್

ಬಾಲಿವುಡ್(Bollywood) ನಟಿ ಸೋನಂ ಕಪೂರ್(Sonam Kapoor) ಸದ್ಯ ಮುದ್ದು ಮಗನ ಆಗಮನದ ಖುಷಿಯಲ್ಲಿದ್ದಾರೆ. ತಾಯ್ತನದ ಖುಷಿಯನ್ನು ಸವಿಯುತ್ತಿದ್ದಾರೆ. ಮಗನ ಪಾಲನೆಯಲ್ಲಿ ಬ್ಯುಸಿಯಿರುವ ನಟಿ ಇದೀಗ ಮೊದಲ ಬಾರಿಗೆ ತನ್ನ ಹೆರಿಗೆಯ ಬಗ್ಗೆ ಸೋನಂ ಮಾತನಾಡಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಸೋನಂ, ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ವಾಯು ಎಂದು ನಾಮಕರಣ ಕೂಡ ಮಾಡಿದ್ದರು. ಸದ್ಯ ಮುಂಬೈನ ತನ್ನ ತಂದೆ ಅನಿಲ್ ಕಪೂರ್(Anil Kapoor) ಮನೆಯಲ್ಲಿ ನೆಲೆಸಿರುವ ಸೋನಂ ಮೊದಲ ಬಾರಿಗೆ ತಮ್ಮ ಹೆರಿಗೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ನಾರ್ಮಲ್ ಡೆಲಿವರಿ(Normal Delivery) ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಈಸಿ ಹೆರಿಗೆಗೆ ಜೆಂಟಲ್ ಬರ್ತ್ ಮೆಥಡ್(Gentle Birth Method) ಅನ್ನು ಅನುಸರಿಸಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಮ್ಮ ಹೆರಿಗೆ ನಾರ್ಮಲ್ ಆಯ್ತು ಎಂದು ತಿಳಿಸಿದ್ದಾರೆ. ನನ್ನ ಗರ್ಭಧಾರಣೆ ವಿಧಾನ ತುಂಬಾ ಭಿನ್ನವಾಗಿದೆ ಎಂದು ಸೋನಂ ಮಾತನಾಡಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಲೆಜೆಂಡ್‌ ಬಾಲಯ್ಯ ಮುಂದೆ ಅಬ್ಬರಿಸಲಿದ್ದಾರೆ `ಕೆಜಿಎಫ್ 2′ ನಟ

ಇನ್ನೂ `ಜೆಂಟಲ್ ಬರ್ತ್ ಮೆಥಡ್’ ಎಂದರೆ ಎಲ್ಲಾ ತಾಯಿಂದರು ಹೆಚ್ಚು ಆರಾಮದಾಯಕ, ಆತ್ಮವಿಶ್ವಾಸದಿಂದ ಮತ್ತು ಸಹಜವಾಗಿ ಜನನ ಪ್ರತಿಕ್ರಿಯೆಯನ್ನು ಹೊಂದಲು ಡಾ.ಮೋತಾ ವಿನ್ಯಾಸಗೊಳಿಸಿದ ವಿಧಾನವಾಗಿದೆ.

Live Tv

Leave a Reply

Your email address will not be published. Required fields are marked *

Back to top button