ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಯಲ್ಲಿ ಹೊಸ ಅತಿಥಿಯ ಆಗಮನದ ಖುಷಿಯಲ್ಲಿರುವ ಸೋನಂ, ಈ ಹಿಂದೆ ಪೋಷಕರ ಜವಾಬ್ದಾರಿ ಬಗ್ಗೆ ಮಾತನಾಡಿರುವ ಸೋನಂ ಮಾತು ಸಖತ್ ವೈರಲ್ ಆಗಿದೆ.
Advertisement
ಸೋನಂ ಕಪೂರ್ ಗಂಡು ಮಗುವಿಗೆ ತಾಯಿಯಾಗಿ, ತಾಯನ್ತದ ಖುಷಿಯಲ್ಲಿದ್ದಾರೆ. ಇದೀಗ ನಟಿ ನೀಡಿರುವ ಇತ್ತೀಚಿನ ಸಂದರ್ಶನದಲ್ಲಿ ನಿರೂಪಕಿ, ನೀವು ಪೋಷಕರಾದ ಸಂದರ್ಭದಲ್ಲಿ ದಂಪತಿಗಳಾಗಿ ಹೇಗೆ ಜವಾಬ್ದಾರಿಯನ್ನು ನಿರ್ವಹಿಸುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!
Advertisement
Advertisement
ನಾನು ಚಿಕ್ಕವಳಿದ್ದಾಗ, ನನ್ನ ತಾಯಿ `ರೂಪ್ ಕಿ ರಾಣಿ ಚೋರೋನ್ ಕಾ ರಾಜಾ’ ಚಿತ್ರದ ಸೆಟ್‌ಗೆ ನನ್ನನ್ನು ಕಳುಹಿಸುತ್ತಿದ್ದರು. ಆಗ ನನ್ನ ತಂದೆಯೇ ನನ್ನನ್ನು ನೋಡಿಕೊಳ್ಳುತ್ತಿದ್ದರು. ನನ್ನ ತಂದೆ ತಾಯಿ ಇಬ್ಬರು ತಮ್ಮ ಜವಾಬ್ದಾರಿಯನ್ನ ಸಮಾನವಾಗಿ ನಿಭಾಯಿಸುತ್ತಿದ್ದರು. ಇದೀಗ ನಾನು ನನ್ನ ಪತಿ ಆನಂದ್ ಕೂಡಾ ಅದೇ ರೀತಿಯಲ್ಲಿ ಸಾಗುತ್ತೇವೆ. ಜತೆಗೆ ಸರಿಯಾದ ಮೌಲ್ಯಗಳೊಂದಿಗೆ ಮಗುವನ್ನು ಹೇಗೆ ಬೆಳೆಸುವುದು ಎಂಬುದರ ಕುರಿತು ಈಗಾಗಲೇ ನಾವಿಬ್ಬರು ಯೋಚಿಸಿದ್ದೇವೆ ಎಂದು ಸೋನಂ ಮಗುವಿನ ಪಾಲನೆಯ ಬಗ್ಗೆ ಮಾತನಾಡಿದ್ದರು. ಮಗುವಿನ ಪಾಲನೆಯಲ್ಲಿ ಗಂಡನಿಗೂ ಜವಾಬ್ದಾರಿಯನ್ನು ವಹಿಸುವುದಾಗಿ ಸೋನಂ ಹೇಳಿಕೊಂಡಿದ್ದಾರೆ.