BollywoodCrimeLatestMain Post

ಬೇಬಿ ಶವರ್‌ನಲ್ಲಿ ಸೋನಮ್ ಕಪೂರ್ ಮಿಂಚಿಂಗ್

ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್, ಸಿನಿಮಾರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ತಮ್ಮ ಖಾಸಗಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಸದ್ಯ ಸೋನಮ್ ಬೇಬಿ ಶವರ್ ಸಂಭ್ರಮದ ಫೋಟೋಗಳು ಸಖತ್ ವೈರಲ್ ಆಗಿದೆ.

`ಸಾವರಿಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಸೋನಮ್ ಕಪೂರ್, ನಂತರ ಆನಂದ್ ಅಹುಜಾ ಜೊತೆ ಹಸೆಮಣೆ ಏರಿದ್ದರು. ಬಳಿಕ ಮಾರ್ಚ್‌ನಲ್ಲಿ ತಾವು ತಾಯಿಯಾಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಬಳಿಕ ಬೇಬಿ ಬಂಪ್ ಫೋಟೋ ಶೂಟ್ ಮೂಲಕ ಸೋನಮ್ ಗಮನ ಸೆಳೆದಿದ್ದರು.‌ ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

 

View this post on Instagram

 

A post shared by Leo Kalyan (@leokalyan)

ಇದೀಗ ತುಂಬು ಗರ್ಭಿಣಿಯಾಗಿರುವ ಸೋನಮ್ ಕಪೂರ್ ಬೇಬಿ ಶವರ್ ಪಾರ್ಟಿಯನ್ನು ಲಂಡನ್‌ನಲ್ಲಿ ಅದ್ದೂರಿಯಾಗಿ ಮಾಡಿ ಕೊಡಲಾಯಿತು. ಆಪ್ತರಿಗಷ್ಟೇ ಆಹ್ವಾನವಿದ್ದ ಈ ಸಮಾರಂಭಕ್ಕೆ ಸಂಗೀತ ಸಂಯೋಜಕ ಲಿಯೋ ಕಲ್ಯಾಣ್ ಭಾಗಿಯಾಗಿ ಸೋನಮ್ ನಟನೆಯ `ಮಸಕಲಿ’ ಹಾಡನ್ನು ಹಾಡಿದ್ದರು. ಈ ಕಲರ್‌ಫುಲ್ ಸಮಾರಂಭದ ಒಂದಿಷ್ಟು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Live Tv

Leave a Reply

Your email address will not be published.

Back to top button