ಸೋನಂ ಕಪೂರ್ ನಿವಾಸದಲ್ಲಿ 1.41 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

Public TV
2 Min Read
soonam kapoor

ಬಾಲಿವುಡ್ ಬೆಡಗಿ ಸೋನಂ ಕಪೂರ್ ಸಿನಿಮಾಗಳಿಗೆ ಬ್ರೇಕ್ ಕೊಟ್ಟು ದಾಂಪತ್ಯ ಜೀವನ ಅನುಭವಿಸುತ್ತಿದ್ದಾರೆ. ಖುಷಿಯಲ್ಲಿರುವವರಿಗೆ ಶಾಕ್ ಕೊಟ್ಟಿದ್ದಾರೆ ಐನಾತಿ ಕಳ್ಳರು. ಸೋನಂ ಕಪೂರ್ ಮತ್ತು ಪತಿ ಆನಂದ್ ಅಹುಜಾ ಅವರ ನವದೆಹಲಿ ನಿವಾಸದಲ್ಲಿ ದರೋಡೆ ನಡೆದಿದ್ದು, 1.41 ಕೋಟಿ ಮೌಲ್ಯದ ಚಿನ್ನಾಭರಣ ಕಳುವು ಮಾಡಲಾಗಿದೆ. ಈ ಕುರಿತು ಸೋನಂ ಕಪೂರ್ ಅವರ ಅತ್ತೆ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

sonam kapoor

ಹೈ ಪ್ರೊಫೈಲ್ ಪ್ರಕರಣ ಇದಾಗಿದ್ದರಿಂದ ದೆಹಲಿ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ವರದಿಗಳ ಪ್ರಕಾರ, ಸೋನಂ ಮತ್ತು ಆನಂದ್ ಅವರ ನವದೆಹಲಿ ನಿವಾಸದಲ್ಲಿದ್ದ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ದೆಹಲಿ ಪೊಲೀಸ್ ರು ಸೋನಂ ನಿವಾಸದ 9 ಕೇರ್ಟೇಕರ್ಗಳು, ಚಾಲಕರು, ತೋಟಗಾರರು ಮತ್ತು ಇತರ ಕಾರ್ಮಿಕರನ್ನು ಹೊರತುಪಡಿಸಿ 25 ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಯಶ್‍ನ ನಾನು ಹೀರೋ ಆಗಿ ಟ್ರೀಟ್ ಮಾಡಲ್ಲ: ಹೆಚ್.ಆರ್ ರಂಗನಾಥ್

sonam kapoor

ದೆಹಲಿ ಪೊಲೀಸರಷ್ಟೇ ಅಲ್ಲ ಎಫ್ಎಸ್ಎಲ್ ಕೂಡ ಸೋನಂ ಮತ್ತು ಆನಂದ್ ಅವರ ದೆಹಲಿ ನಿವಾಸದಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹುಡುಕುತ್ತಿದ್ದಾರೆ. ಪ್ರಕರಣದ ಕುರಿತು ತೀವ್ರ ತನಿಖೆ ಮುಂದುವರಿದಿದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

sonam kapoor 1515494997

ನಡೆದಿದ್ದೇನು?
ಅಮೃತಾ ಶೆರ್ಗಿಲ್ ಮಾರ್ಗದಲ್ಲಿರುವ ದೆಹಲಿ ನಿವಾಸದಲ್ಲಿ, ಸೋನಂ ಅವರ ಮಾವ ಹರೀಶ್ ಅಹುಜಾ ಮತ್ತು ಅತ್ತೆ ಪ್ರಿಯಾ ಅಹುಜಾ ಆನಂದ್ ಅವರ ಅಜ್ಜಿ ಸರಳಾ ಅಹುಜಾ ಅವರೊಂದಿಗೆ ವಾಸವಾಗಿದ್ದಾರೆ. ಫೆಬ್ರವರಿ 11 ರಂದು ಸೋನಂ ಫ್ಯಾಮಿಲಿ ಕಪಾಟುಗಳು ಮತ್ತು ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ ಎಂದು ಸರಳಾ ಅಹುಜಾ ದೂರಿನಲ್ಲಿ ಹೇಳಿದ್ದಾರೆ. ಫೆಬ್ರವರಿ 23 ರಂದು ದೂರು ದಾಖಲಾಗಿದೆ. ಈ ವೇಳೆ ಅವರು, ನಾನು ನಮ್ಮ ಚಿನ್ನಾಭರಣವನ್ನು ಪರಿಶೀಲಿಸಿ 2 ವರ್ಷವಾಗಿದ್ದು, ಫೆ.11ರಂದು ಚೆಕ್ ಮಾಡಿದಾಗ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

Sonam Kapoor 3

ದೂರನ್ನು ಪಡೆದ ಪೊಲೀಸರು ಸೋನಂ ಮತ್ತು ಆನಂದ್ ಅವರ ಮನೆಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಹುಡುಕಲು ಕಳೆದ ವರ್ಷದಿಂದ ರೆಕಾರ್ಡ್ ಆದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅಲ್ಲದೇ ಕಳೆದ ತಿಂಗಳು, ಸೋನಂ ಅವರ ಮಾವನ ಸಂಸ್ಥೆಗೆ 27 ಕೋಟಿ ರೂ. ವಂಚಿಸಲಾಗಿದೆ ಎಂದು ವರದಿಯೊಂದು ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಬಾಲಿವುಡ್ ಮಾತಿಗೆ ಖಡಕ್ಕಾಗಿ ಉತ್ತರಿಸಿದ ಪ್ರಿನ್ಸ್ ಮಹೇಶ್

SonamKapoorಪ್ರಸ್ತುತ ಸೋನಂ ಮತ್ತು ಆನಂದ್ ಮುಂಬೈನಲ್ಲಿದ್ದಾರೆ. ಸೋನಂ ಆನಂದ್ ಅವರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಆಕೆ ತನ್ನ ತಂದೆ ಅನಿಲ್ ಕಪೂರ್ ಮನೆಯಲ್ಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *