ನಾವಿಬ್ಬರೂ ಒಟ್ಟಿಗೆ ಇರದ ಮೊದ್ಲ ಹುಟ್ಟುಹಬ್ಬ- ಮಗನ ಬರ್ತ್ ಡೇಗೆ ಸೋನಾಲಿ ಬೇಂದ್ರೆಯ ಭಾವುಕ ಪೋಸ್ಟ್

Public TV
2 Min Read
SONALI BENDRE

ಮುಂಬೈ: ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರ ತಮ್ಮ ಮಗನ ಹುಟ್ಟುಹಬ್ಬದಂದು ಜೊತೆಯಲ್ಲಿ ಇರಲು ಸಾಧ್ಯವಾಗಿಲ್ಲ ಎಂದು ಇನ್ಸ್ ಸ್ಟಾಗ್ರಾಂನಲ್ಲಿ ಒಂದು ಮನಮಿಡಿಯುವ ಪೋಸ್ಟ್ ಹಾಕಿದ್ದಾರೆ.

ಸೋನಾಲಿ ಬೇಂದ್ರೆ ಅವರ ಮಗ ರಣವೀರ್ ಹುಟ್ಟುಹಬ್ಬ ಶನಿವಾರ 11 ರಂದು ಇತ್ತು. ಆದ್ರೆ ಸೋನಾಲಿ ಅವರು ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ ಕಾರಣ ಭಾರತದಲ್ಲಿರುವ ತಮ್ಮ ಮಗನ ಬರ್ತ್ ಡೇ ದಿನ ಅವರ ಮಗನ ಜೊತೆ ಇರಲು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ನಾವಿಬ್ಬರು ಒಟ್ಟಿಗೆ ಇರದ ಹುಟ್ಟುಹಬ್ಬ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತನ್ನ ಭಯಾನಕ ಕಾಯಿಲೆ ಬಗ್ಗೆ ಹೇಳಿಕೊಂಡ ಸೋನಾಲಿ ಬೇಂದ್ರೆ

sonali bendre

ಸೋನಾಲಿ ಬೇಂದ್ರೆ ಅವರ ಪೋಸ್ಟ್?
“ರಣವೀರ್! ನನ್ನ ಸೂರ್ಯ, ಚಂದ್ರ, ನಕ್ಷತ್ರಗಳು, ಆಕಾಶ.. ನಾನು ಸ್ವಲ್ಪ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಿದ್ದೇನೆ. ಆದರೂ ನಿನ್ನ 13ನೇ ಹುಟ್ಟುಹಬ್ಬಕ್ಕೆ ಇದು ಅರ್ಹತೆ ಇದೆ. ವಾವ್ ನೀನು ಈಗ ಟೀನೇಜರ್. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಗುತ್ತದೆ. ನಿನ್ನ ಬುದ್ಧಿ, ಹಾಸ್ಯ, ಶಕ್ತಿ, ದಯೆ ಮತ್ತು ನಿನ್ನ ಕಿಡಿಕೇಡಿತನ ಎಲ್ಲದರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಆದರೆ ಅದನ್ನು ಹೇಳಲು ಸ್ಯಾಧ್ಯವಾಗುತ್ತಿಲ್ಲ. ಹುಟ್ಟುಹಬ್ಬದ ಶುಭಾಶಯಗಳು ಮಗನೇ, ನಾವಿಬ್ಬರೂ ಒಟ್ಟಿಗೆ ಇರದ ಮೊದಲ ಹುಟ್ಟುಹಬ್ಬ ಇದಾಗಿದೆ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸೋನಾಲಿ ಬೇಂದ್ರೆ ಅವರು ಬರೆದು ಕೊಂಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

ಸೋನಾಲಿ ಬೇಂದ್ರೆ ಅವರಿಗೆ ತೋರಿಸುತ್ತಿರುವ ಪ್ರೀತಿ ಮತ್ತು ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದಗಳು. ಸದ್ಯಕ್ಕೆ ಯಾವುದೇ ತೊಂದರೆಗಳಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಕೂಡ ಸುಧಾರಿಸುತ್ತಿದೆ ಎಂದು ಅವರ ಪತಿ ಗೋಲ್ಡಿ ಬೆಲ್ ಅವರು ಅಭಿಮಾನಿಗೆ ತಿಳಿಸಿದ್ದಾರೆ.

Sonali Bendre

ಇತ್ತೀಚೆಗೆ ಸೋನಾಲಿ ಬೇಂದ್ರೆ ತಮಗೆ ಕ್ಯಾನ್ಸರ್ ಕಾಯಿಲೆ ಇರುವುದಾಗಿ ಬಹಿರಂಗಪಡಿಸಿದ್ದರು. ಅವರು ತಮ್ಮದೊಂದು ಫೋಟೋವನ್ನು ಹಾಕಿ ಅದಕ್ಕೆ, “ನಾವು ಜೀವನದಲ್ಲಿ ಹೆಚ್ಚು ವಿಶ್ವಾಸವನ್ನಿಟ್ಟಾಗ ಜೀವನ ದೊಡ್ಡದೊಂದು ಆಘಾತ ನೀಡುತ್ತದೆ. ನನಗೆ ಹೈ ಗ್ರೇಡ್ ಕ್ಯಾನ್ಸರ್ ಇದೆ ಎಂಬುದು ನನಗೆ ಇತ್ತೀಚಿಗೆ ತಿಳಿಯಿತು. ಈ ವಿಷಯ ತಿಳಿದು ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನ ಜೊತೆಯಲ್ಲೇ ಇದ್ದಾರೆ. ನಾನು ಇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಸೋನಾಲಿ ಕನ್ನಡದಲ್ಲಿ ಶಿವರಾಜ್‍ಕುಮಾರ್ ಮತ್ತು ಉಪೇಂದ್ರ ಜೊತೆ `ಪ್ರೀತ್ಸೆ’ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಅಲ್ಲದೇ ಹಿಂದಿಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಹಮ್ ಸಾಥ್ ಸಾಥ್ ಹೈ, ಸರ್ಫರೋಶ್, ಕಲ್ ಹೋ ನಾ ಹೋ ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮದುವೆಯಾದ್ಮೇಲೆ ಚಿತ್ರರಂಗದಿಂದ ದೂರವಿದ್ದ ಸೋನಾಲಿ ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

https://www.instagram.com/p/BmUz5ALFUAs/?taken-by=iamsonalibendre

Share This Article
Leave a Comment

Leave a Reply

Your email address will not be published. Required fields are marked *