‘ಕಾಟೇರ’ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ (Sonal Monteiro) ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿರುವ (Wedding) ಸುಂದರ ಫೋಟೋಗಳು ಇಲ್ಲಿವೆ.
ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಉಂಗುರ ಬದಲಾಯಿಸಿಕೊಂಡ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿವೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ
ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್‌ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಈ ಮದುವೆ ಸಂಭ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಕುಟುಂಬ ಕೂಡ ಭಾಗಿಯಾಗಿತ್ತು.
ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡಿದೆ. ಈ ಅದ್ಧೂರಿ ಆರತಕ್ಷತೆನಲ್ಲಿ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ.
ಇನ್ನೂ ‘ರಾಬರ್ಟ್’ ಸಿನಿಮಾ ಸೆಟ್‌ನಲ್ಲಾದ ಗೆಳೆತನ ಸೋನಲ್ ಮತ್ತು ತರುಣ್ ಮದುವೆಗೆ ಮುನ್ನುಡಿ ಬರೆಯಿತು. ಈ ಮದುವೆಗೆ ನೇತೃತ್ವ ವಹಿಸಿದ್ದೇ ದರ್ಶನ್. ಆದರೆ ಜೈಲು ಪಾಲಾಗಿರುವ ದರ್ಶನ್ ಅನುಪಸ್ಥಿತಿ ನೆನೆದು ಮದುವೆ ದಿನ (ಆ.11) ಸೋನಲ್ ಮತ್ತು ತರುಣ್ ಭಾವುಕರಾಗಿದ್ದರು.
ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು.