BollywoodCinemaLatestMain Post

ಮದುವೆ ಯಾವಾಗ? ಅಭಿಮಾನಿಗೆ ವ್ಯಂಗ್ಯವಾಗಿ ಉತ್ತರಿಸಿದ ಸೋನಾಕ್ಷಿ

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರಿಗೆ ಮದುವೆ ಯಾವಾಗ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಎದುರಾಗಿದೆ. ಈ ಕುರಿತಾಗಿ ನಟಿ ಕೊಟ್ಟಿರುವ ಉತ್ತರ ಅಭಿಮಾನಿಗಳಿಗೆ ಕೊಂಚ ಬೇಸರ ಉಂಟು ಮಾಡಿದೆ ಎನ್ನಲಾಗಿದೆ.

ಇತ್ತೀಚೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳು ಸೋನಾಕ್ಷಿ ಅವರಿಗೆ, ಮೇಡಂ ಎಲ್ಲರೂ ಮದುವೆಯಾಗುತ್ತಿದ್ದಾರೆ ನಿಮ್ಮ ಮದುವೆ ಯಾವಾಗ? ಎಂದು ಪ್ರಶ್ನೆ ಕೇಳಿದ್ದರು. ಈ ಕುರಿತಾಗಿ ವ್ಯಂಗ್ಯವಾಗಿ ಉತ್ತರಿಸಿದ ಸೋನಾಕ್ಷಿ, ಎಲ್ಲರಿಗೂ ಕೊರೊನಾ ಸೋಂಕು ತಗುಲುತ್ತಿದೆ. ಹಾಗಂತ ನಾನು ಸೋಂಕಿಗೆ ಒಳಗಾಗಲೇ? ಎಂದು ಉತ್ತರಿಸಿದ್ದಾರೆ.

ಸೋನಾಕ್ಷಿ ಅವರ ಉತ್ತರಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಡಿಸಿದ್ದಾರೆ. ಮದುವೆಯಾವುದಕ್ಕೂ, ಕೊರೊನಾ ಸೋಂಕಿಗೂ ಎಲ್ಲಿ ಸಂಬಂಧ, ಕೊರೊನಾವನ್ನು ಬೇಕು ಅಂತಾ ಎಲ್ಲರೂ ತಗುಲಿಸಿಕೊಳ್ಳುತ್ತಿದ್ದಾರ ಎಂದು ಖಾರವಾಗಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ನಟ, ನಟಿಯರಿಗೆ ಬಹುತೇಕವಾಗಿ ಮದುವೆ ಕುರಿತಾದ ಪ್ರಶ್ನೆ ಎದುರಾಗುತ್ತದೆ. ಆದರೆ ಕೆಲವರು ವಿಭಿನ್ನವಾಗಿ ಉತ್ತರಿಸುತ್ತಾರೆ. ಆದರೆ ಸೋನಾಕ್ಷಿ ಅವರ ಉತ್ತರ ಮಾತ್ರ ಬಾಲಿವುಡ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಸೋನಾಕ್ಷಿ ಸಿನ್ಹಾ 2010ರಲ್ಲಿ ದಬಾಂಗ್ ಚಿತ್ರದ ಮೂಲಕ ಸಲ್ಮಾನ್ ಖಾನ್ ಜೊತೆ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದೀಚೆಗೆ, ಅವರು ಹಲವು ಹಿಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಬೇಡಿಕಯ ನಟಿಯರ ಸಾಲಿನಲ್ಲಿ ಸೋನಾಕ್ಷಿ ಸಿನ್ಹಾ ಕೂಡಾ ಒಬ್ಬರಾಗಿದ್ದಾರೆ. ಇದನ್ನೂ ಓದಿ:  ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

Leave a Reply

Your email address will not be published.

Back to top button