ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಸಹೋದರ ಕುಶ್ ಸಿನ್ಹಾ ನಿರ್ದೇಶನದ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ನಿಕಿತಾ ರಾಯ್’ ಕಥೆ ಹೇಳೋಕೆ ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್
ಯಶಸ್ವಿ ನಟಿಯಾಗಿ ಸೈ ಎನಿಸಿಕೊಂಡಿದ್ದ ಸೋನಾಕ್ಷಿ ಇದೀಗ ಸಕ್ಸಸ್‌ಗಾಗಿ ಎದುರು ನೋಡ್ತಿದ್ದಾರೆ. ಹೀಗಾಗಿ ಸಹೋದರ ಕುಶ್ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದಾರೆ. ‘ನಿಕಿತಾ ರಾಯ್’ ಚಿತ್ರವು ಮಾನಸಿಕ ಒತ್ತಡ ಹಾಗೂ ಮನುಷ್ಯನ ದುರ್ಬಲತೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ ಇದಾಗಿದೆ. ಈ ವರ್ಷ ಮೇ 30ರಂದು ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
ಈ ಚಿತ್ರದಲ್ಲಿ ಸೋನಾಕ್ಷಿ ಜೊತೆ ಅರ್ಜುನ್ ರಾಮ್‌ಪಾಲ್, ಪರೇಶ್ ರಾವಲ್, ಸುಹೇಲ್ ನಯ್ಯರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಕುಶ್ ಅವರು ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬರುತ್ತಿದ್ದಾರೆ. ಯಶಸ್ಸಿಗಾಗಿ ಸೋನಾಕ್ಷಿ ಮತ್ತು ಕುಶ್ ಇಬ್ಬರೂ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ನಿಕಿತಾ ರಾಯ್’ ಚಿತ್ರದ ಮೂಲಕ ಸಕ್ಸಸ್ ಕಾಣ್ತಾರಾ? ಎಂದು ಕಾದುನೋಡಬೇಕಿದೆ.