ಬಾಲಿವುಡ್ ನಟಿ ಸೋನಾಕ್ಷಿ ನಿನ್ಹಾ ಈಗ ಇತ್ತೀಚೆಗೆ ನಟ ಜಹೀರ್ ಇಕ್ಬಾಲ್ ಜತೆಗಿನ ಡೇಟಿಂಗ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ಮಧ್ಯೆ ಮೌನವಾಗಿದ್ದ ಸೋನಾಕ್ಷಿ ಸಿನ್ಹಾ ತಮ್ಮ ಮದುವೆಯ ಗಾಸಿಪ್ ಕೇಳಿ ಮಾತನಾಡಿದ್ದಾರೆ. ತಮ್ಮ ಮದುವೆ, ಸಂಸಾರದ ಕುರಿತು ಇರುವ ತಮ್ಮ ಆಲೋಚನೆಯನ್ನ ಬಹಿರಂಗಪಡಿಸಿದ್ದಾರೆ.
ಬಿಟೌನ್ `ದಬಾಂಗ್’ ಬ್ಯೂಟಿ ಸೋನಾಕ್ಷಿ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನ ತಮ್ಮ ಗೆಳೆಯ ಸಲ್ಮಾನ್ ಖಾನ್ ಆಪ್ತ ಸ್ನೇಹಿತ ನಟ ಜಹೀರ್ ಜತೆ ಆಚರಿಸಿಕೊಂಡಿದ್ದರು. ಹಾಗಯೇ ಜಹೀರ್ ಜತೆಗಿನ ಸೋನಾಕ್ಷಿ ಡೇಟಿಂಗ್ ವಿಚಾರವು ಬಿಟೌನ್ ಗಲ್ಲಿನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಯ್ತು. ಈ ಬೆನ್ನಲ್ಲೇ ತಮ್ಮ ಮದುವೆಯ ಗಾಸಿಪ್ ಕೇಳಿ ಸೋನಾಕ್ಷಿ ಸಿನ್ಹಾ ಸಖತ್ ಗರಂ ಆಗಿದ್ದಾರೆ. ಮದುವೆಯ ಕುರಿತು ಗಾಸಿಪ್ ಮಾಡುವವರಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ.
ನಾನು ಇನ್ನೂ ಮದುವೆಗೆ ಸಿದ್ಧ ಆಗಿಲ್ಲ. ಜಗತ್ತಿನ ಜತೆ ನನ್ನ ಖಾಸಗಿ ವಿಚಾರವನ್ನ ಹಂಚಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಆದರೆ ಜನರಿಗೆ ನನನ್ನ ತಿಳಿದುಕೊಳ್ಳಲು ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಅರಿಯಲು ಇಷ್ಟಪಡುತ್ತಾರೆ. ನನ್ನ ತಂದೆ ತಾಯಿಗಿಂತ ಬೇರೆಯವರಿಗೆ ನನ್ನ ಮದುವೆಯ ಚಿಂತೆ ಇದೆ ಎಂದು 35ರ ಚೆಲುವೆ ಸೋನಾಕ್ಷಿ ಸಿನ್ಹಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ನಯನತಾರಾ- ವಿಘ್ನೇಶ್ ಶಿವನ್ ಮದುವೆಯಲ್ಲಿ ಸ್ಟಾರ್ ಕಲಾವಿದರ ದಂಡು: ಮದುವೆ ಆಲ್ಬಂ ಔಟ್
ನನ್ನ ತಂದೆ ತಾಯಿ ನನ್ನ ಮದುವೆಯ ಬಗ್ಗೆ ಸದ್ಯ ಆಲೋಚನೆ ಮಾಡಿಲ್ಲ. ಇನ್ನು ನಾನು ನನ್ನ ವೃತ್ತಿ ಜೀವನದ ಕಡೆ ಗಮನ ಹರಿಸುತ್ತೀದ್ದೇನೆ. ಸಾಕಷ್ಟು ಸಿನಿಮಾಗಳು ನನ್ನ ಕೈಯಲ್ಲಿದೆ ಅದರ ಕುರಿತು ಖುಷಿಯಾಗಿದ್ದೇನೆ ಎಂದು ಮದುವೆ ಕುರಿತು ಸದ್ಯ ಆಲೋಚನೆ ಇಲ್ಲ ಎಂಬುದನ್ನ ನಟಿ ಸ್ಪಷ್ಟಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]