ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

Public TV
2 Min Read
ira khan

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಈ ವೇಳೆ ಇರಾ ಟ್ರೋಲ್ ಆಗಿದ್ದು, ಅದಕ್ಕೆ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಗಾಯಕಿ ಸೋನಾ ಮೋಹಪತ್ರಾ ಸಹ ಇರಾಗೆ ಸಾಥ್ ಕೊಟ್ಟಿದ್ದಾರೆ.

ira

ಅಮೀರ್ ಖಾನ್ ಅವರ ಮಗಳು ಇರಾ ಅವರನ್ನು ಟ್ರೋಲಿಗರು, ಇರಾ ಅವರು ವಯಸ್ಸಾದವರು. ಹಂದಿಯಂತಹ ಮುಖವನ್ನು ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ಈ ಟ್ರೋಲ್ ಗೆ ಪ್ರತಿಕ್ರಿಯಿಸಿದ ಇರಾ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದು, ನಾನು ಸಾರ್ವಜನಿಕವಾಗಿ ಮಾನಸಿಕ ಸಮಸ್ಯೆಗಳನ್ನು ಹಂಚಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ಏಕೆ ಈ ರೀತಿ ಟ್ರೋಲ್ ಮಾಡುತ್ತಿದ್ದೀರಾ ಎಂದು ನಿಮಗೆ ತಿಳಿದಿರಲಿ. ಸಾರ್ವಜನಿಕವಾಗಿ ಈ ರೀತಿ ಸಮಸ್ಯೆಗಳ ಬಗ್ಗೆ ಮಾತನಾಡುವುದು ತುಂಬಾ ಮುಖ್ಯ. ಈ ಬಗ್ಗೆ ಮಾತನಾಡುವುದು ಮತ್ತು ಮಾನಸಿಕ ಆರೋಗ್ಯವನ್ನು ಸಾಮಾನ್ಯಗೊಳಿಸುವುದು ಮುಖ್ಯ. ನಿಮ್ಮ ಬಗ್ಗೆ ನೀವು ಮೊದಲು ಹೋರಾಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಸಹೋದರನೊಂದಿಗೆ ಸಾರಾ ಅಲಿ ಖಾನ್ ಕಾಶ್ಮೀರ ಟ್ರಿಪ್

ira

ನಿಮ್ಮ ಸಮಸ್ಯೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಎಂದು ನಾನು ಎಲ್ಲರಿಗೂ ಹೇಳುವುದಿಲ್ಲ. ಅದನ್ನು ನಾನು ತೀರ್ಮಾನಿಸುವುದಿಲ್ಲ. ಸಾರ್ವಜನಿಕವಾಗಿ ಹಂಚಿಕೊಳ್ಳಲು ಆಸಕ್ತಿಯಿಲ್ಲದ ಸಾಕಷ್ಟು ಬುದ್ಧಿವಂತ, ಧೈರ್ಯಶಾಲಿ ಜನರನ್ನು ನಾನು ಬಲ್ಲೆ. ಸೊಶಿಯಲ್ ಮೀಡಿಯಾದಲ್ಲಿ ದ್ವೇಷ ಮತ್ತು ಕಾಮೆಂಟ್‍ಗಳಿಂದ ತೊಂದರೆಗೊಳಗಾಗುವ ಸಾಕಷ್ಟು ಬುದ್ಧಿವಂತ, ಧೈರ್ಯಶಾಲಿ ಜನರನ್ನು ನಾನು ಬಲ್ಲೆ. ಆದ್ದರಿಂದ ಅವರು ತಮ್ಮ ಅಮೂಲ್ಯ ಶಕ್ತಿಯನ್ನು ಬೇರೆಡೆ ಕೇಂದ್ರೀಕರಿಸುತ್ತಾರೆ. ಟೇಕ್ ಕೇರ್ ಎಂದು ಟ್ರೋಲಿಗರಿಗೆ ಖಡಕ್ ಆಗಿ ಹೇಳಿದ್ದಾರೆ.

 

View this post on Instagram

 

A post shared by Ira Khan (@khan.ira)

ಗಾಯಕಿ ಸೋನಾ ಮೋಹಪತ್ರಾ ಈ ಪೋಸ್ಟ್ ಗೆ ‘ಗುಡ್, ಗೊಂಬೆ’ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಟ್ರೋಲಿಗರಿಗೆ, ನಿಮ್ಮ ಈ ರೀತಿಯ ಪೋಸ್ಟ್ ಅನುಭವಿಸುವವರಿಗೆ ವಿಷದ ರೀತಿ ಇರುತ್ತೆ. ಹೋಗಿ ಏನಾದರೂ ಕೆಲಸ ಕಲಿಯಿರಿ. ನಿಮ್ಮ ಹೆತ್ತವರಿಗೆ ಅವಮಾನ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

sonu

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಇರಾ ಆಗಾಗ್ಗೆ ತಾನು ಅನುಭವಿಸಿದ ಮಾನಸಿಕ ಖಿನ್ನತೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಕಾರಣದಿಂದ ಇರಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *