-15 ವರ್ಷದ ನಂತ್ರ ನಾನೇ ನಿನ್ನ ಮಗನೆಂದು ತಂದೆ ಬಳಿ ಬಂದ ಯುವಕ
ಕಾರವಾರ: ಮೂವತ್ತು ವರ್ಷಗಳ ಹಿಂದೆ ತಾಯಿ ಜೊತೆ ಮಕ್ಕಳು ಕಾಣೆಯಾದರೂ, ನಾಲ್ಕು ದಿನದಲ್ಲೇ ಒಬ್ಬ ಮಗ ತಂದೆ ಬಳಿ ಬಂದರೆ, ಇನ್ನೊಬ್ಬ 15 ವರ್ಷದ ನಂತರ ನಾನೇ ನಿನ್ನ ಮಗನೆಂದು ಬಂದನು. ಆದರೆ ಈ ಘಟನೆ ನಡೆದು 15 ವರ್ಷದ ನಂತರ ತಾನೇ ನಿನ್ನ ಮಗ ಎಂದು ತಂದೆ ಬಳಿ ಮತ್ತೊಬ್ಬ ಬಂದಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿ ಗ್ರಾಮದಲ್ಲಿ ನಡೆದಿದೆ. ಇಬ್ಬರಲ್ಲಿ ತನ್ನ ಮಗ ಯಾರು ಎಂದು ತಂದೆ ತಲೆಕೆಡಿಸಿಕೊಂಡಿದ್ದು ಈಗ ಇಬ್ಬರು ಮಕ್ಕಳು ಎನ್ನುವರು ಡಿಎನ್‍ಎ ಪರೀಕ್ಷೆಗೆ ಮುಂದಾಗಿದ್ದಾರೆ.
75 ವರ್ಷದ ವೆಂಕಟರಮಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ಕಳೆದ 30 ವರ್ಷದ ಹಿಂದೆ ವೆಂಕಟರಮಣ ಪತ್ನಿ ತನ್ನ ನಾಲ್ಕು ಜನ ಮಕ್ಕಳೊಂದಿಗೆ ಅನ್ಯಧರ್ಮದ ಯುವಕನೊಂದಿಗೆ ಓಡಿ ಹೋಗಿದ್ದಳು. ಈ ಸಂದರ್ಭದಲ್ಲಿ ಮೊದಲ ಮಗ ಸುರೇಶ್ ತಾಯಿಯನ್ನು ಬಿಟ್ಟು ತಂದೆ ಬಳಿ ಓಡಿ ಬಂದರೆ, ಇಬ್ಬರು ಹೆಣ್ಣು ಮಕ್ಕಳಾದ ನೀಲಮ್ಮ, ನಾಗಮ್ಮ ಹಾಗೂ ಮಂಜುನಾಥ್ ತಾಯಿ ಬಳಿ ಉಳಿಯುತ್ತಾರೆ. ಆದರೆ 15 ವರ್ಷದ ನಂತರ ತಾನೇ ನಿನ್ನ ಮಗ ಮಂಜುನಾಥ್ ಎಂದು ವೆಂಕಟರಮಣ ಮನೆಗೆ ಬಂದು ಇಲ್ಲಿಯೇ ಮದುವೆಯಾಗಿ ಮನೆಯಲ್ಲಿಯೇ ಪಾಲು ಮಾಡಿಕೊಂಡು ಅಣ್ಣ-ತಮ್ಮಂದಿರು ಉಳಿಯುತ್ತಾರೆ.
ಇನ್ನೊಬ್ಬ ಮಗನೂ ಸಿಕ್ಕಿದ ಸಂತೋಷದಿಂದ ಇದ್ದ ವೆಂಕಟರಮಣನಿಗೆ ಅಹ್ಮದ್ ಎಂಬ ಯುವಕ ತನ್ನ ಅಕ್ಕಂದಿರು ಹಾಗೂ ತಾಯಿಯ ಫೋಟೋ ಸಮೇತ ಸಾಕ್ಷಿ ಹಿಡಿದು ತಾನೇ ಮಂಜುನಾಥ್ ಎಂದು ಹೇಳಿಕೊಂಡು ಬಂದಿದ್ದಾನೆ. ಆದರೆ ಮೊದಲೇ ಮಂಜುನಾಥ್ ಎಂದು ಹೇಳಿಕೊಂಡು ಬಂದಿದ್ದ ಇನ್ನೊಬ್ಬ ಯುವಕ ಈಗ ನಾನೇ ಮಂಜುನಾಥ್ ಎನ್ನುತ್ತಿದ್ದು ಡಿಎನ್‍ಎ ಪರೀಕ್ಷೆಗೂ ಸಿದ್ಧ ಎನ್ನುತ್ತಿದ್ದಾನೆ. ಆದರೆ ಮೊದಲ ಮಗ ಸುರೇಶ್ ಈಗ ಬಂದವನೇ ನನ್ನ ತಮ್ಮ ಹಾಗೂ ಸಹೋದರಿಯರು ಎಂದರೆ ವೆಂಕಟರಮಣ ಮಾತ್ರ ತಲೆಕೆಡಿಸಿಕೊಂಡಿದ್ದು, ಒಂದು ಬಾರಿ ಈತ ಇನ್ನೊಂದು ಬಾರಿ ಆತನನ್ನು ಮಗ ಎನ್ನುತ್ತಿದ್ದು ಗೊಂದಲ ಸೃಷ್ಟಿಯಾಗಿದೆ.
ತಂದೆಯನ್ನು ತ್ಯಜಿಸಿ ತಾಯಿ ಅನ್ಯಧರ್ಮಿಯನೊಂದಿಗೆ ಕಲಘಟಗಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಮೂರು ಜನ ಮಕ್ಕಳು ಧರ್ಮಾಂತರಗೊಳ್ಳುತ್ತಾರೆ. ತಾಯಿಯನ್ನು ಕರೆದುಕೊಂಡು ಬಂದ ಆ ವ್ಯಕ್ತಿ ಇವರಿಗೆ ಕೈಕೊಟ್ಟು ಹೋಗುತ್ತಾನೆ. ನಂತರ ಅಕ್ಷರಶ: ಅನಾಥರಾದ ಇವರು ತಾಯಿ ಜೊತೆ ಕೂಲಿ ಕೆಲಸ ಮಾಡಿ ಬದುಕು ನೂಕುತ್ತಾರೆ. ತಾಯಿ ಕೂಡ ತೀರಿಕೊಂಡಿದ್ದರಿಂದ ತಂದೆ ನೋಡಬೇಕು ಎನಿಸಿದೆ. ತಂದೆಯ ವಿಳಾಸ ಮೊದಲೇ ತಿಳಿದಿದ್ದ ಈತ ತಂದೆ ಬಳಿ ಬಂದು ತಾನೇ ನಿನ್ನ ಮಗ ಎನ್ನುತ್ತಾನೆ. ಆದರೆ 15 ವರ್ಷದ ಹಿಂದೆ ತನ್ನ ಮಗ ಬಂದಿದ್ದು ನೀನು ನನ್ನ ಮಗನಲ್ಲಾ ಎಂದು ದೂರ ಸರಿಸುತ್ತಾರೆ. ಆದರೆ ತಾನೂ ಸಾಕ್ಷಿ ಸಮೇತ ಬರುವುದಾಗಿ ಹೇಳಿ ಇಂದು ತನ್ನ ಅಕ್ಕಂದಿರೊಂದಿಗೆ ತಾಯಿಯ ಫೋಟೋ ಸಮೇತವಾಗಿ ಅಂಕೋಲಕ್ಕೆ ಬಂದ ಈತ ತಂದೆಗೆ ತೋರಿಸಿದ್ದಾನೆ. ಇದಲ್ಲದೇ ತಾನೇ ಮಗ ಎಂದು ಸಾಬೀತು ಮಾಡಲು ಯಾವುದಕ್ಕೂ ಸಿದ್ಧವಾಗಿದ್ದೇನೆ. ಆಸ್ತಿಗಾಗಿ ಇಲ್ಲಿ ಬಂದಿಲ್ಲ ತಂದೆ ನೋಡಬೇಕು ಎನ್ನುವ ಹಂಬಲದಿಂದ ಇಲ್ಲಿಗೆ ಬಂದಿದ್ದೇವೆ. ಆಸ್ತಿ ಮನೆ ಬೇಕಿಲ್ಲ ಎಂದು ಕಲಗಟಗಿಯಿಂದ ಇಲ್ಲಿಗೆ ಬಂದ ಮಂಜುನಾಥ್ ಹೇಳುತ್ತಿದ್ದಾರೆ.
ವೆಂಕಟರಮಣನಿಗೆ ಯವ್ವನದಲ್ಲಿ ಅನೈತಿಕ ಸಂಬಂದವಿತ್ತು ಎಂದು ಹೇಳಲಾಗುತ್ತಿದ್ದು, ಇನ್ನೊಬ್ಬನೂ ಈತನ ಮಗನಿರಬಹುದು ಎಂದು ಊರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ತಾನೇ ಮಗನೆಂದು ಬಂದ ಅಹ್ಮದ್, ಮಂಜುನಾಥ್ ಸಾಕ್ಷಿ ಮುಂದಿಟ್ಟಿದ್ದಾನೆ. ಆದರೆ ಮಂಜುನಾಥ್ ಎಂದು ಹೇಳಿಕೊಂಡ ಯುವಕ ಮಾತ್ರ ಯಾರ ಕೈಗೂ ಸಿಗದೇ ತಲೆ ತಪ್ಪಿಸಿಕೊಳ್ಳುತ್ತಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಈಗ ಡಿಎನ್‍ಎ ಪರೀಕ್ಷೆ ನಂತರವೇ ಇಬ್ಬರು ಇವನ ಮಕ್ಕಳಾ ಅಥವಾ ಒಬ್ಬ ಮಾತ್ರ ಮಗನೇ ಎಂಬುದು ತಿಳಿದು ಬರಲಿದೆ.