ಮಡಿಕೇರಿ: ಹಿಟ್ಟಿನ ಗಿರಣಿ ಬೆಲ್ಟ್ ಗೆ ಸಿಲುಕಿದ ತಾಯಿಯನ್ನು ಸಮಯ ಪ್ರಜ್ಞೆಯಿಂದ ಬಾಲಕ ರಕ್ಷಿಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.
Advertisement
ಬೆಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡೂರು ಗ್ರಾಮದಲ್ಲಿ ಹಿಟ್ಟಿನ ಗಿರಣಿ ಬೆಲ್ಟ್ ಗೆ ತಾಯಿ ಅರ್ಪಿತಾ ಸಿಲುಕಿಕೊಂಡಿದ್ದು, ಬಾಲಕ ದೀಕ್ಷಿತ್(8) ಸಮಯ ಪ್ರಜ್ಞೆಯಿಂದ ರಕ್ಷಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಇದನ್ನೂ ಓದಿ: ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು
Advertisement
Advertisement
ಮನೆಯಲ್ಲಿ ಹಾಗೂ ಹಿಟ್ಟಿನ ಗಿರಣಿಯಲ್ಲಿ ಯಾರು ಇಲ್ಲದೇ ಇರುವಾಗ ಚಾಲನೆಯಲ್ಲಿದ್ದ ಗಿರಣಿಯ ಬೆಲ್ಟ್ ಗೆ ಆಕಸ್ಮಿಕವಾಗಿ ಅರ್ಪಿತಾ ಅವರ ತಲೆ ಸಿಲುಕಿಕೊಂಡಿದೆ. ಈ ಸಂಬಂಧ ಅರ್ಪಿತಾ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಹಿಟ್ಟಿನ ಗಿರಣಿ ಮುಂಭಾಗದ ಸ್ವಲ್ಪ ದೂರದಲ್ಲಿ ಅಟವಾಡುತ್ತಿದ್ದ ದೀಕ್ಷಿತ್ ತಾಯಿಯ ಕೂಗು ಕೇಳಿ ಓಡಿಬಂದಿದ್ದಾನೆ. ಸನ್ನಿವೇಶವನ್ನು ನೋಡಿ ಸಮಯಪ್ರಜ್ಞೆ ತೋರಿ ಹಿಟ್ಟಿನ ಗಿರಣಿಯ ಮೈನ್ ಸ್ವಿಚ್ ಆಫ್ ಮಾಡಿದ್ದಾನೆ. ಈ ಮೂಲಕ ಪ್ರಾಣಾಪಾಯದಿಂದ ತನ್ನ ತಾಯಿಯನ್ನು ಕಾಪಾಡಿದ್ದಾನೆ.
Advertisement
ದೀಕ್ಷಿತ್ ಗಿರಣಿ ಮಾಲೀಕ ರವಿಕುಮಾರ್ ಮತ್ತು ಅರ್ಪಿತಾ ದಂಪತಿಯ ಪುತ್ರನಾಗಿದ್ದು, ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾನೆ.