ಹೈದರಾಬಾದ್: ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗದಿದ್ದರೆ ಟೀಚರ್ ಗೆ ಹೇಳ್ತೀನಿ ಎಂದು ಪೋಷಕರು ಹೆದರಿಸಿ ಕಳುಹಿಸುತ್ತಾರೆ. ಆದರೆ ತೆಲಂಗಾಣದಲ್ಲಿ ತಾಯಿಯೊಬ್ಬಳು ಪೊಲೀಸರನ್ನೇ ಮನೆಗೆ ಕರೆಸಿದ ವಿಚಿತ್ರ ಘಟನೆಯೊಂದು ನಡೆದಿದೆ.
ಹೌದು. ಮೆಹಬೂಬ್ ನಗರದ ನಿವಾಸಿ ಮಹಿಳೆಯ ಮಗ ಶಾಲೆಗೆ ಹೋಗುವುದಿಲ್ಲ ಎಂದು ಹಠಮಾಡುತ್ತಿದ್ದನು. ಶಾಲೆಗೆ ಹೋಗುವಂತೆ ತಾಯಿ ಪರಿಪರಿಯಾಗಿ ಮಗನ ಬಳಿ ಕೇಳಿಕೊಂಡರೂ ಆತ ಶಾಲೆಗೆ ಹೋಗಲು ನಿರಾಕರಿಸಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ, ಬೇರೆ ದಾರಿ ಇಲ್ಲದೆ ನೇರವಾಗಿ `100′ ನಂಬರಿಗೆ ಕರೆ ಮಾಡಿದ್ದಾರೆ.
Advertisement
Advertisement
ಕರೆಯಲ್ಲಿ ಮಹಿಳೆ, ಯಾರಾದ್ರೂ ಡ್ಯೂಟಿಯಲ್ಲಿದ್ದ ಪೊಲೀಸರನ್ನು ತಕ್ಷಣವೇ ಮನೆಗೆ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಮಹಿಳೆಯ ಮಾತು ಆಲಿಸಿದ ಪೊಲೀಸರು, ಏನೋ ಅನಾಹುತ ಸಂಭವಿಸಿರಬೇಕೆಂದು ತಕ್ಷಣವೇ ತಮ್ಮ ವಾಹನದಲ್ಲಿ ಮಹಿಳೆ ತಿಳಿಸಿದ ವಿಳಾಸದಂತೆಯೇ ಮನೆಗೆ ಬಂದಿದ್ದಾರೆ.
Advertisement
ಹೀಗೆ ಬಂದ ಪೊಲೀಸರಿಗೆ ಶಾಕ್ ಕಾದಿತ್ತು. ಮಹಿಳೆ, ನನ್ನ ಮಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ. ಅಲ್ಲದೆ ನಾನು ಯಾವುದೇ ಕಾರಣಕ್ಕೂ ಕ್ಲಾಸಿಗೆ ಹೋಗಲ್ಲವೆಂದು ಹಠ ಮಾಡಿ ಮನೆಯಲ್ಲಿ ಅಡಗಿ ಕೂತಿದ್ದಾನೆ. ಹೀಗಾಗಿ ನೀವೇ ಅವನಿಗೆ ಬುದ್ಧಿ ಹೇಳಿ ಶಾಲೆಗೆ ಹೋಗುವಂತೆ ಪ್ರೇರೇಪಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.
Advertisement
ಏನೋ ಅಂದುಕೊಂಡು ಬಂದು ಇನ್ನೇನೋ ಆಗೋಯ್ತು ಎಂದು ಸಿಟ್ಟಾದ ಪೊಲೀಸರು, ಮಹಿಳೆಯ ಪರಿಸ್ಥಿತಿಯನ್ನು ಅರಿತುಕೊಂಡು ಅಡಗಿ ಕುಳಿತಿದ್ದ ಬಾಲಕನನ್ನು ಕರೆದು ಆತನಿಗೆ ಕೌನ್ಸಿಲಿಂಗ್ ಮಾಡಿದ್ದಾರೆ. ನಂತರ ತಮ್ಮ ವಾಹನದಲ್ಲಿಯೇ ಆತನನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸರು ಅಪ್ರಾಪ್ತ ಬಾಲಕನಿಗೆ ಕೌನ್ಸಿಲಿಂಗ್ ನೀಡಿದ್ದಕ್ಕೆ ಮಕ್ಕಳ ಹಕ್ಕುಗಳ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ಅವನಿಗೆ ಯಾಕೆ ಶಾಲೆಗೆ ಹೋಗಲು ಇಷ್ಟವಿಲ್ಲ ಹಾಗೂ ಯಾವ ಸಮಸ್ಯೆಗಳನ್ನು ಆತ ಎದುರಿಸುತ್ತಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸಬೇಕಿತ್ತು. ಆದರೆ ಈ ಘಟನೆ ದೌರ್ಜನ್ಯವೆಸಗಿದಂತಿದೆ. ಇದೊಂದು ಗಂಭೀರ ವಿಚಾರವಾಗಿದೆ. ರಾಜ್ಯದಲ್ಲಿ ಇದು 2ನೇ ಘಟನೆಯಾಗಿದ್ದು, ಇದು ಹೀಗೆ ಮುಂದುವರಿದರೆ ತುಂಬಾ ಅಪಾಯಕಾರಿಯಾಗಲಿದೆ. ಪೊಲೀಸರಿಗೆ ಮಕ್ಕಳ ಸಮಸ್ಯೆಗಳು ಗೊತ್ತಿರುತ್ತದೆ. ಹೀಗಾಗಿ ಅವರು ಇಂತಹ ವಿಚಾರಗಳು ಬಂದಾಗ ವೃತ್ತಿಪರರ ಸಹಾಯ ಪಡೆದುಕೊಳ್ಳಬೇಕು ಎಂದು ಬಲಾಲ ಹಕ್ಕು ಸಂಘಂನ ಕಾರ್ಯಕರ್ತ ಅಚ್ಚಯು ರಾವ್ ತಿಳಿಸಿದ್ದಾರೆ.