13 ವರ್ಷಗಳ ನಂತರ ಮತ್ತೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ ಸನ್ ಆಫ್ ಸರ್ದಾರ್ (S0n Of Sardaar-2). 2012ರಲ್ಲಿ ತೆರೆಕಂಡು ಅದ್ಭುತ ರೆಸ್ಪಾನ್ಸ್ ಪಡೆದುಕೊಂಡ ಸನ್ ಆಫ್ ಸರ್ದಾರ್ ಚಿತ್ರದ ಸಿಕ್ವೇಲ್ ತೆರೆಗೆ ಬರೋಕೆ ರೆಡಿಯಾಗಿದೆ. ಕಾಮಿಡಿ ಎಂಟರ್‌ಟೈನ್ಮೆಂಟ್‌ನಿಂದ ಗಮನ ಸೆಳೆದ ಸನ್ ಆಫ್ ಸರ್ದಾರ್ ಚಿತ್ರದ ಪಾರ್ಟ್-2 ಆಗಷ್ಟ್ 1ಕ್ಕೆ ತೆರೆಗೆ ಬರ್ತಿದೆ.
ಅಜಯ್ ದೇವಗನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸನ್ ಆಫ್ ಸರ್ದಾರ್ ಸಿನಿಮಾದ ಸಿಕ್ವೇಲ್ ಇದೇ ಜುಲೈ 25ಕ್ಕೆ ತೆರೆಕಾಣಬೇಕಿತ್ತು. ಆದ್ರೆ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಮುಂದೂಡಿದೆ. ಅಂದಹಾಗೆ ಸನ್ ಆಫ್ ಸರ್ದಾರ್-2 ಸಿನಿಮಾ ಆಗಷ್ಟ್ 1ಕ್ಕೆ ತೆರೆ ಕಾಣಲಿದ್ದು, ಸಿನಿ ರಸಿಕರ ಹೊಟ್ಟೆ ಹುಣ್ಣಾಗಿಸೋಕೆ ಮತ್ತಷ್ಟು ಎಂಟರ್‌ಟೈನ್ಮೆಂಟ್ ಎಲಿಮೆಂಟ್‌ನಿಂದ ಎಂಟ್ರಿ ಕೊಡುತ್ತಿದೆ. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್ ರಿಲೀಸ್ – ಖದರ್ ಲುಕ್‌ನಲ್ಲಿ ದರ್ಶನ್, ಡಿಬಾಸ್ ಫ್ಯಾನ್ಸ್‌ಗೆ ಹಬ್ಬ
ಸನ್ ಆಫ್ ಸರ್ದಾರ್-2 ಸಿನಿಮಾದಲ್ಲಿ ಅಜಯ್ ದೇವಗನ್ (Ajay Devgn), ಮೃಣಾಲ್ ಠಾಕೂರ್, ರವಿ ಕಿಶನ್, ಸಂಜಯ್ ಮಿಶ್ರಾ, ನೀರು ಭಾಜ್ವಾ ಸೇರಿದಂತೆ ಅತಿದೊಡ್ಡ ತಾರಾಗಣವಿದೆ. ಜುಲೈ 25ಕ್ಕೆ ಮನರಂಜನೆಯನ್ನ ಸ್ವಾಗತಿಸಲು ತಯಾರಾಗಿದ್ದ ಫ್ಯಾನ್ಸ್ ಕೊಂಚ ನಿರಾಶರಾಗಿದ್ದಾರೆ. ಆದರೆ ಮನರಂಜನೆಯ ಮಹಾಪೂರ ಆಗಷ್ಟ್ 1ಕ್ಕೆ ಶಿಫ್ಟ್ ಆಗಿದೆ.