ಆನೇಕಲ್: ಆಕೆ ಹೊಟ್ಟೆ ಬಟ್ಟೆ ಕಟ್ಟಿ ಮಗನನ್ನ ಸಾಕಿದ್ಳು. ಎದೆ ಎತ್ತರಕ್ಕೆ ಬೆಳೆದು ನಿಂತ ಮಗ ತಾಯಿಗೂ ನೆರಳಾಗಿದ್ದ. ಆದರೆ ಮೊಬೈಲ್ ಗಾಗಿ ನಡೆದ ಗಲಾಟೆ ಆತನನ್ನ ಹಂತಕನನ್ನಾಗಿ ಮಾಡಿಬಿಡ್ತು. ಜನ್ಮ ಕೊಟ್ಟ ಅಮ್ಮನನ್ನೇ ಕೊಂದು ಪೊಲೀಸರ ಅತಿಥಿಯಾಗಿದ್ದಾನೆ. ಆಕೆ ಗಂಡನಿಲ್ಲದ ಮಗಳಿಗೆ ನೆರಳಾಗಿದ್ಳು. ಅನಾರೋಗ್ಯದಿಂದ ಬಳಲುತ್ತಿದ್ದ ಪತಿಗೆ ಆಸರೆಯಾಗಿದ್ಳು. ಪಿಟ್ಸ್ ಖಾಯಿಲೆಯಿಂದ ನರಳ್ತಿದ್ದ ಮಗನಿಗೂ ಹೆಗಲಾಗಿದ್ಳು. ಸೊಪ್ಪು ಮಾರಿ ಇಡೀ ಸಂಸಾರವನ್ನೇ ನೋಡಿಕೊಳ್ತಿದ್ಳು. ಆದರೆ ಜನ್ಮ ಕೊಟ್ಟ ಮಗನೇ ಇವತ್ತು ಹೆತ್ತಮ್ಮನ ಉಸಿರು ನಿಲ್ಲಿಸಿದ್ದಾನೆ. ಮೊಬೈಲ್ ಕೊಡಿಸಿಲ್ಲ ಅನ್ನೋ ಕೋಪಕ್ಕೆ ಕೊಂದೇ ಬಿಟ್ಟಿದ್ದಾನೆ.
ಈಕೆಯ ಹೆಸರು ಫಾತಿಮಾ ಮೇರಿ 50 ವರ್ಷ. ಮೂಲತಃ ತಮಿಳುನಾಡಿನವರಾಗಿರುವ ಇವರು 20 ವರ್ಷದ ಹಿಂದೆಯೇ ಬೊಮ್ಮನಹಳ್ಳಿ ಸಮೀಪದ ಬೇಗೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು. ಐದು ವರ್ಷದ ಹಿಂದಷ್ಟೇ ಲೂಕಾಸ್ ಲೇಔಟ್ ನ ಇದೇ ಬಾಡಿಗೆ ಮನೆಯಲ್ಲಿ ವಾಸವಿದ್ರು. ಪತಿ ಅರೋಗ್ಯಸ್ವಾಮಿ ಅನಾರೋಗ್ಯದಿಂದ ಬಳಲ್ತಿದ್ದಾರೆ. 28 ವರ್ಷದ ಮಗ ದೀಪಕ್ ಗೂ ಪಿಟ್ಸ್ ಇದೆ. ಮಗಳು ಜಾಯಿಸ್ ಮೇರಿ ಮದುವೆಯಾಗಿದ್ದು ಎರಡು ವರ್ಷ ಹಿಂದಷ್ಟೇ ಪತಿ ತೀರಿಕೊಂಡು ತಾಯಿ ಮನೆಯಲ್ಲಿಯೇ ವಾಸವಿದ್ದಾಳೆ. ಮಡಿವಾಳ ಮಾರ್ಕೆಟ್ ನಲ್ಲಿ ಸೊಪ್ಪು ಮಾರಿ ಇಡೀ ಕುಟುಂಬವನ್ನೇ ಸಾಕ್ತಿದ್ಳು. ಆದರೆ ಆಕೆಯ ಸಾವು ಇಡೀ ಕುಟುಂಬವೇ ಬೀದಿಗೆ ಬೀಳುವಂತೆ ಮಾಡಿದೆ. ಇದನ್ನೂ ಓದಿ: ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ
ಮಗ ದೀಪಕ್ ಮೊಬೈಲ್ ಡಿಸ್ಪ್ಲೇ ಮೂರು ತಿಂಗಳ ಹಿಂದೆಯೇ ಒಡೆದುಹೋಗಿತ್ತು. ಅಂದಿನಿಂದ ತಾಯಿಗೆ ಹೊಸ ಮೊಬೈಲ್ ಕೊಡಿಸುವಂತೆ ಗಂಟುಬಿದ್ದಿದ್ದ. ಆದರೆ ತಾಯಿ ಮಾತ್ರ ದುಡ್ಡಿಲ್ಲ ಜೀವನ ಸಾಗಿಸೋದೆ ಕಷ್ಟ ಆಗಿದೆ ಸ್ವಲ್ಪದಿನ ಕಾಯುವಂತೆ ಹೇಳಿದ್ಳು. ಜೂನ್ 1ರಂದು ಎಂದಿನಂತೆ ಫಾತಿಮಾ ಮೇರಿ ಗಂಡ ಆರೋಗ್ಯಸ್ವಾಮಿ ಹಾಗೂ ಮಗ ಪದೀಪಕ್ ಮೂರು ಗಂಟೆಗೆ ಎದ್ದು ಮಡಿವಾಳ ಮಾರ್ಕೆಟ್ ಗೆ ತೆರಳಿ ಸೊಪ್ಪು ವ್ಯಾಪಾರ ಮುಗಿಸಿ ಮನೆಗೆ ಬಂದಿದ್ರು. ಸ್ವಲ್ಪಹೊತ್ತು ಮಲಗಿ 10 ಗಂಟೆ ಸುಮಾರಿಗೆ ಫಾತಿಮಾ ಮೇರಿ ನೈಸ್ ರಸ್ತೆ ಪಕ್ಕದಲ್ಲೇ ಇರೊ ಮೈಲಸಂದ್ರ ಬಳಿಯ ತೋಟಕ್ಕೆ ನಾಳೆಗೆ ಅಂತಾ ಸೊಪ್ಪು ಕೀಳಲು ಬ್ಯಾಗ್ ಹಿಡಿದು ಬಂದಿದ್ದಾರೆ. ಮಧ್ಯಾಹ್ನ 12 ಗಂಟೆ ಆಗ್ತಿದ್ದಂತೆ ಮಲಗಿದ್ದ ಮಗನನ್ನ, ತಂಗಿ ಜಾಯಿಸ್ ಮೇರಿ ಬಳಿ ಕರೆತರುವಂತೆ ಹೇಳಿ ಕಳಿಸಿದ್ದಾಳೆ. ಈ ವೇಳೆ ತಾಯಿ ಬಳಿ ಬಂದವನು ಮೊಬೈಲ್ ಕೊಡಿಸುವಂತೆ ಕೇಳಿಕೊಂಡಿದ್ದ. ತಾಯಿ ಒಪ್ಪದಿದ್ದಾಗ ಜಗಳವಾಗಿದೆ. ತಾಯಿ ಮಗನಿಗೆ ಥಳಿಸಿದ್ದಾಳೆ. ಈತನು ಹೊಡೆದಿದ್ದ. ಕೋಪಗೊಂಡ ದೀಪಕ್ ತಾಯಿ ಉಟ್ಟಿದ್ದ ಅದೇ ಸೀರೆಯಿಂದ ಕತ್ತು ಬಿಗಿದು ಕೊಂದೇ ಬಿಟ್ಟಿದ್ದ.
ಬಳಿಕ ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ ಆರೋಪಿ ಮಗ ದೀಪಕ್ ನನ್ನ ಬೇಗೂರು ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.