ಚಿತ್ರದುರ್ಗ: ಸಕಾಲಕ್ಕೆ ಮದುವೆ ಮಾಡಲಿಲ್ಲವೆಂದು ಆಕ್ರೋಶಗೊಂಡ ಪಾಪಿಪುತ್ರನೋರ್ವ (Son) ಹೆತ್ತ ತಂದೆಯನ್ನೇ (Father) ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ (Hosadurga) ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಣ್ಣನಿಂಗಪ್ಪ ಮೃತ ತಂದೆ. ಈತನ ಚಿಕ್ಕಮಗ ನಿಂಗರಾಜ್ ನನ್ನ ಜೊತೆಗೆ ಬೆಳೆದ ಸ್ನೇಹಿತರೆಲ್ಲರೂ ಮದುವೆಯಾದರು. ಆದರೆ ನೀನು ನನಗೆ ಸಕಾಲಕ್ಕೆ ಮಾಡಲಿಲ್ಲವೆಂದು ತಂದೆಯೊಂದಿಗೆ ದಿನವೂ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ಅಣ್ಣ, ಅಕ್ಕ, ತಾಯಿ, ಕುಟುಂಬಸ್ಥರು ಎಷ್ಟೇ ಬುದ್ಧಿವಾದ ಹೇಳಿದರೂ ಜಗಳ ಮಾತ್ರ ನಿಲ್ಲಿಸಿರಲಿಲ್ಲ. ಇದೇ ವಿಚಾರಕ್ಕೆ ಸಿಟ್ಟಾಗಿದ್ದ ನಿಂಗರಾಜ್ (36) ಬುಧವಾರ ರಾತ್ರಿ ತಂದೆ ಸಣ್ಣನಿಂಗಪ್ಪ (65) ಮಲಗಿದ್ದ ವೇಳೆ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಬೆಳಗಾವಿ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ – ಮತ್ತೆ ಮೂವರು ಸಾವು, ಮೃತರ ಸಂಖ್ಯೆ 7ಕ್ಕೆ ಏರಿಕೆ
ಮೃತ ಸಣ್ಣನಿಂಗಪ್ಪನಿಗೆ ಮೂವರು ಮಕ್ಕಳು. ಹಿರಿಯ ಮಗ ಮಾರುತಿ, ಎರಡನೇ ಮಗ ನಿಂಗರಾಜ್, ಕಿರಿಯ ಮಗಳು ಜ್ಯೋತಿ. ಮಾರುತಿ ಹಾಗೂ ಜ್ಯೋತಿಗೆ ಮದುವೆಯಾಗಿತ್ತು. ಆದರೆ ನಿಂಗರಾಜ್‌ಗೆ ಮದುವೆ ಆಗಿರಲಿಲ್ಲ. ಹೀಗಾಗಿ ಬುಧವಾರ ನಿಂಗರಾಜ್ ಮದುವೆ ಮಾಡದ ವಿಚಾರಕ್ಕೆ ತಂದೆ ಸಣ್ಣನಿಂಗಪ್ಪ ಜೊತೆಗೆ ಜಗಳ ಮಾಡಿದ್ದ. ಆಗ ಹೊಸದುರ್ಗದಲ್ಲಿ ಇದ್ದ ಹಿರಿಯ ಮಗ ಮಾರುತಿಯನ್ನು ಮನೆಗೆ ಕರೆದು ಬುದ್ಧಿ ಹೇಳಿಸಿದ್ದರು. ಆದರೆ ಇಷ್ಟಕ್ಕೆ ಸುಮ್ಮನೆ ಆಗದ ನಿಂಗರಾಜ್ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದಂತಹ ತಂದೆ ಸಣ್ಣನಿಂಗಪ್ಪನಿಗೆ ಟ್ರ‍್ಯಾಕ್ಟರ್‌ನಲ್ಲಿದ್ದ ರಾಡ್‌ನಿಂದ ತಲೆಗೆ ಹೊಡೆದು ಪರಾರಿ ಆಗಿದ್ದಾನೆ. ಇದನ್ನೂ ಓದಿ: ಇಂದೋರ್ ಕಲುಷಿತ ನೀರು ಸೇವನೆ ಕೇಸ್; ನಿಯಂತ್ರಣ ಕ್ರಮ ವಿವರಿಸುವಂತೆ ಸಿಎಸ್‌ಗೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನ
ಈ ವೇಳೆ ಸಣ್ಣನಿಂಗಪ್ಪನ ಕೂಗಾಟ ಕೇಳಿ ಕುಟುಂಬಸ್ಥರು ಎದ್ದಿದ್ದು, ಹಲ್ಲೆಗೊಳಗಾಗಿ ತೀವ್ರ ರಕ್ತ ಸ್ರಾವಗೊಂಡಿದ್ದಂತಹ ಸಣ್ಣನಿಂಗಪ್ಪನನ್ನು ಹೊಸದುರ್ಗ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದರು. ಈ ವೇಳೆ ಪರೀಕ್ಷೆ ನಡೆಸಿದಂತಹ ವೈದ್ಯರು ಸಣ್ಣನಿಂಗಪ್ಪ ಮೃತ ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ – ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು
ಘಟನೆ ಸಂಬಂಧ ಹಿರಿಯ ಮಗ ಮಾರುತಿ, ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ತಮ್ಮ ನಿಂಗರಾಜ್ ತಂದೆ ಸಣ್ಣನಿಂಗಪ್ಪನನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡ ಹೊಸದುರ್ಗ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ.ಟಿ.ರಮೇಶ್ ನೇತೃತ್ವದಲ್ಲಿ ಪಿಎಸ್‌ಐ ಮಹೇಶ್ ಕುಮಾರ್.ಎಸ್, ಕ್ರೈಂ ಪಿಸಿ ರಮೇಶ್ ಕೊಲೆ ಆರೋಪಿ ನಿಂಗರಾಜ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಪಾಟ್ನಾ, ಕಾಸರಗೋಡು ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

