ಬೆಂಗಳೂರು: ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನೇ ಮಗ ಹತ್ಯೆಗೈದಿರುವ ಘಟನೆ ನಗರದ ಮಾರತ್ ಹಳ್ಳಿಯ ದೇವರ ಬಿಸನಹಳ್ಳಿಯಲ್ಲಿ ನಡೆದಿದೆ.
ಮೃತದುರ್ದೈವಿಯನ್ನು ಯಮುನಮ್ಮ (70) ಎಂದು ಗುರುತಿಸಲಾಗಿದೆ. ಮಗ ಅಂಬರೀಶ್ ಆರೋಪಿಯಾಗಿದ್ದಾನೆ. ಮದ್ಯವ್ಯಸನಾಗಿದ್ದ ಅಂಬರೀಶ್ ಕುಡಿಯಲು ಹಣ ನೀಡುವಂತೆ ಯಮುನಮ್ಮ ಅವರನ್ನು ಪೀಡಿಸಿದ್ದಾನೆ. ಆದರೆ ಹಣ ನೀಡಲು ನಿರಾಕರಿಸಿದ ಯಮುನಮ್ಮ ಹಾಗೂ ಅಂಬರೀಶ್ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಅಂಬರೀಶ್ ಯಮುನಮ್ಮ ಅವರ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಕಲಬುರಗಿಯ ಐವರು ವಿದ್ಯಾರ್ಥಿಗಳು
ತೀವ್ರ ಸ್ವರೂಪದ ಏಟು ಬಿದ್ದ ಕಾರಣ ಸ್ಥಳದಲ್ಲೇ ತಾಯಿ ಯಮುನಮ್ಮ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ಇದೀಗ ಈ ಸಂಬಂಧ ಮಾರತ್ತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ