ಧಾರವಾಡ: ಆಸ್ತಿಗಾಗಿ ಹೆತ್ತ ತಾಯಿಯನ್ನೆ ಕ್ರೂರಿ ಮಗನೊಬ್ಬ ಹತ್ಯೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ(65) ವೃದ್ಧೆಯೇ ಹತ್ಯೆಯಾದ ದುರ್ದೈವಿ. ಬಸವರಾಜ್ ಕಲ್ಲಪ್ಪ ಅಣ್ಣಿಗೇರಿ ತಾಯಿಯನ್ನೆ ಕೊಲೆ ಮಾಡಿದ ಮಗ. ಬಸವರಾಜ್ ಕ್ರೂರ ಕೃತ್ಯ ಸ್ಥಳೀಯರಿಗೆ ತಿಳಿದುಬಂದ ತಕ್ಷಣ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪರಿಣಾಮ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ
ಕಾರಣವೇನು?
ಬಸವರಾಜ್ ನಿತ್ಯವೂ ‘ಆಸ್ತಿಯನ್ನು ನನಗೆ ಕೊಡು’ ಎಂದು ಶಾಂತವ್ವನನ್ನು ಪೀಡಿಸಿ ಕಿರುಕುಳ ನೀಡುತ್ತಿದ್ದ. ಇದಕ್ಕೆ ಶಾಂತವ್ವ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಸೋಮವಾರ(ಇಂದು) ಬಸವರಾಜ್ ಮತ್ತೆ ಆಸ್ತಿಗಾಗಿ ಪೀಡಿಸಿದ್ದು, ಶಾಂತವ್ವನನ್ನು ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಅಲ್ಲೇ ಇದ್ದ ದೊಣ್ಣೆಯಿಂದ ಶಾಂತವ್ವನನ್ನು ಹೊಡೆದಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ.