ಗದಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೇ ತನ್ನ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.
ಗಣೇಶ್ ಚಿಕ್ಕನಹಟ್ಟಿ (57) ಮೃತ ದುರ್ದೈವಿ. ಮಗ ವಿಜಯ್ ಚಿಕ್ಕನಹಟ್ಟಿ ಎಂಬಾತ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ. ತಂದೆ ಗಣೇಶ್ ದುಡಿಯಲು ಹೋಗುತ್ತಿರಲಿಲ್ಲ. ನಿತ್ಯ ಕುಡಿದು ಬಂದು ಮನೆಯವರಿಗೆಲ್ಲಾ ಕಿರುಕುಳ ನೀಡುತ್ತಿದ್ದ. ಕುಡಿಯಲು ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದ. ಹಣ ನೀಡದೇ ಹೋದರೆ ಮನೆಯವರಿಗೆ ಹೊಡೆಯುವುದು, ಮನೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಇದರಿಂದ ಕುಟುಂಬಸ್ಥರು ಬೇಸತ್ತಿದ್ದರು.
Advertisement
Advertisement
ಇಂದು ಸಹ ಗಣೇಶ್ ಕುಟುಂಬಸ್ಥರ ಜೊತೆ ಜಗಳವಾಡಿ ಮನೆಯಲ್ಲಿ ಮಲಗಿದ್ದ. ಈ ವೇಳೆ ಗಣೇಶ್‍ನ ಕುತ್ತಿಗೆಗೆ ಮಗ ವಿಜಯ್ ಕೊಡಲಿಯಿಂದ ಕೊಚ್ಚಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಪರಿಣಾಮ ತಂದೆ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ರಾಷ್ಟ್ರದ ಅಭಿವೃದ್ಧಿಗೆ ತಾಂತ್ರಿಕ ಪ್ರಗತಿ ಬಹಳ ಮುಖ್ಯ: ರಾಜ್ಯಪಾಲ ಗೆಹ್ಲೋಟ್
Advertisement
ಆರೋಪಿ ವಿಜಯ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ತಂದೆ ಮಗನ ಕಲಹ ಕೊಲೆಯೊಂದಿಗೆ ಅಂತ್ಯವಾಗಿದೆ. ಇದನ್ನೂ ಓದಿ: ದೇಶದಲ್ಲಿ ಕೊರೊನಾ ಏರಿಕೆ – ವಿಮಾನ ಪ್ರಯಾಣದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ: ಡಿಜಿಸಿಎ